Chocolate : ಚಾಕೊಲೇಟ್ ಗಳಲ್ಲಿ ಆಲ್ಕೋಹಾಲ್ ಅಂಶ ಪತ್ತೆ!!

Share the Article

Chocolate : ವಿದೇಶದಿಂದ ಆಮದಾಗುತ್ತಿರುವ ಚಾಕಲೇಟ್ ಗಳಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗುತ್ತಿದ್ದು ಇವುಗಳ ಪರೀಕ್ಷೆಗಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮಾದರಿಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ.

ಈ ಚಾಕೊಲೇಟ್‌ಗಳನ್ನು ವ್ಯಾಪಕವಾಗಿ ಸೇವಿಸಲಾಗುತ್ತಿದ್ದು, ಇವುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ, ವಿಶೇಷವಾಗಿ ಮಕ್ಕಳಿಗೆ, ಚಾಕೊಲೇಟ್‌ಗಳಲ್ಲಿರುವ ಆಲ್ಕೋಹಾಲ್ ಅಂಶದ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ಎಫ್‌ಡಿಎಯ ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.

ಹೀಗಾಗಿ ಲೇಬಲ್ ಗಳ ಮೇಲೆ ಗಮನ ಹರಿಸುತ್ತಿರುವ ಇಲಾಖೆ ವಿಶೇಷವಾಗಿ ಆಲ್ಕೋಹಾಲ್ ಅಂಶ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಬಹಿರಂಗಪಡಿಸದೆ ಮಾರಾಟವಾಗುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಿಗಾ ವಹಿಸಿದೆ. ರಾಷ್ಟ್ರೀಯ ವಾರ್ಷಿಕ ಕಣ್ಗಾವಲು ಯೋಜನೆಯ (NASP) ಭಾಗವಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿರ್ದೇಶನ ಪಡೆದ ನಂತರ ಇಲಾಖೆಯು ಈ ಅಭಿಯಾನವನ್ನು ಪ್ರಾರಂಭಿಸಿದೆ.

ಈ ಮಾದರಿಗಳನ್ನು ಗುಣಮಟ್ಟ, ಸುರಕ್ಷತೆ ಮತ್ತು ಲೇಬಲಿಂಗ್ ಮತ್ತು ಜಾಹೀರಾತು ನಿಯಮಗಳ ಕುರಿತು ಪರೀಕ್ಷಿಸಲಾಗುತ್ತದೆ. ಸಂಗ್ರಹಿಸಿದ ಡೇಟಾವನ್ನು ಕೇಂದ್ರ ಆಹಾರ ಸುರಕ್ಷತಾ ಅನುಸರಣಾ ವ್ಯವಸ್ಥೆಗೆ (FoSCoS) ಅಪ್‌ಲೋಡ್ ಮಾಡಲಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

Comments are closed.