Delhi : ಆಪ್ ಪಕ್ಷಕ್ಕೆ ‘ಆಪ್’ ಇಟ್ಟ ದೆಹಲಿ 13 ಕೌನ್ಸಿಲರ್ ಗಳು – ರಾಜೀನಾಮೆ ನೀಡಿ ಹೊಸ ಪಕ್ಷ ಸ್ಥಾಪನೆ!!

Share the Article

Delhi: ಹುಟ್ಟಿಕೊಂಡ ಕೆಲವೇ ಸಮಯದಲ್ಲಿ ದೇಶಾದ್ಯಂತ ಹೊಸ ಹುರುಪನ್ನು ಸೃಷ್ಟಿಸಿದ್ದ ಆಮ್ ಆದ್ಮಿ ಪಕ್ಷಕ್ಕೆ ದೆಹಲಿಯ 13 ಕೌನ್ಸಿಲರ್ ಗಳು ಶಾಕ್ ನೀಡಿದ್ದಾರೆ.

ಹೌದು, ಒಂದು ರೀತಿಯಲ್ಲಿ ‘ಆಪ್’ ಪಕ್ಷಕ್ಕೆ ದೆಹಲಿ 13 ಕೌನ್ಸಿಲರ್ ಗಳು ‘ಆಪ್’ ಇಟ್ಟಿದ್ದಾರೆ. ಯಾಕೆಂದರೆ ಈ 13 ಕೌನ್ಸಿಲರ್ ಗಳು ತಮ್ಮ ಪಕ್ಷಕ್ಕೆ ಹಾಗೂ ಸ್ಥಾನಮಾನಕ್ಕೆ ರಾಜೀನಾಮೆ ನೀಡಿ ಮುಖೇಶ್ ಗೋಯೆಲ್ ನೇತೃತ್ವದಲ್ಲಿ, ಇಂದ್ರಪ್ರಸ್ಥ ವಿಕಾಸ್ ಪಾರ್ಟಿ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದಾರೆ.

ಅಂದಹಾಗೆ ಫೆಬ್ರವರಿಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಗೋಯೆಲ್ ಆದರ್ಶ ನಗರದಿಂದ ಎಎಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತರು. ಕಳೆದ ಪುರಸಭೆ ಚುನಾವಣೆಗಳಿಗೆ ಮುನ್ನ, ಈ ನಾಯಕರು ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು. 25 ವರ್ಷಗಳ ಕಾಲ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿರುವ ಗೋಯೆಲ್, 2021 ರಲ್ಲಿ ಕಾಂಗ್ರೆಸ್ ನಿಂದ ಎಎಪಿಗೆ ಸೇರಿದ್ದರು. ಈಗ ಇತರ ಸದಸ್ಯರನ್ನು ಸೇರಿಸಿಕೊಂಡು ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವನ್ನೇ ಸ್ಥಾಪಿಸಿದ್ದಾರೆ.

Comments are closed.