Kerala: ರೆಸಾರ್ಟ್‌ನಲ್ಲಿ ಟೆಂಟ್ ಕುಸಿದು ಟೂರಿಸ್ಟ್ ಮಹಿಳೆ ಸಾವು

Tiruvananthapura: ಕೇರಳದ ವಯನಾಡ್ ಜಿಲ್ಲೆಯ ಜನಪ್ರಿಯ ರೆಸಾರ್ಟ್‌ವೊಂದರಲ್ಲಿ ತಾತ್ಕಾಲಿಕ ಟೆಂಟ್ ಕುಸಿದು ಯುವತಿ ಸಾವಿಗೀಡಾದ ಘಟನೆ ನಡೆದಿದೆ.
ಮೆಪ್ಪಾಡಿಯಲ್ಲಿರುವ 900 ಕಂಡಿ ಇಕೋಪಾರ್ಕ್ ಎಂಬ ರೆಸಾರ್ಟ್‌ನಲ್ಲಿ ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಬಳಿಯ ಅಕಂಪಡಂ ಮೂಲದ ನಿಶ್ಮಾ (24) ಎಂದು ಗುರುತಿಸಲಾಗಿದೆ.
ಮರದ ಕಂಬಗಳನ್ನು ಒಣ ಹುಲ್ಲನ್ನು ಬಳಸಿ ನಿರ್ಮಿಸಲಾಗಿತ್ತು. ತಾತ್ಕಾಲಿಕ ಟೆಂಟ್ ನಾಲ್ವರು ಪ್ರವಾಸಿಗರ ಮೆಲೆ ಬಿದ್ದಿದ್ದೆ. ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಗಾಯಗೊಂಡ ಉಳಿದ ಮೂವರು ಪ್ರವಾಸಿಗರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Comments are closed.