Bangalore: ಭೀಕರ ಅಪಘಾತ: ಸ್ಥಳದಲ್ಲೇ ಸಾವಿಗೀಡಾದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ

Share the Article

Bangalore: ನಾಲ್ಕು ದಿನದ ಹಿಂದೆ ಬೆಂಗಳೂರಿನ ರಸ್ತೆಯಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ.

ದೇವತಾ (24) ಮೃತಪಟ್ಟ ವಿದ್ಯಾರ್ಥಿನಿ.

ದೇವತಾ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಆಯತಪ್ಪಿ ರಸ್ತೆಗೆ ಬಿದ್ದಿದ್ದಾಳೆ. ಈ ವೇಳೆ ಎದುರಿನಿಂದ ಬಂದ ಕಾರು ಆಕೆಯ ಮೇಲೆ ಹರಿದು ಹೋಗಿದೆ. ಪರಿಣಾಮ ವಿದ್ಯಾರ್ಥಿನಿ ಧರಿಸಿದ್ದ ಹೆಲ್ಮೆಟ್‌ ಬೇರ್ಪಟ್ಟಿದ್ದು, ಯುವತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ.

ಎದುರುಗಡೆ ಬ್ಯಾನರ್‌ ಇದ್ದಿದ್ದರಿಂದ ಕಾರು ಚಾಲಕ ಸ್ವಲ್ಪ ಬಲಕ್ಕೆ ಬಂದಿದ್ದಾನೆ. ಹೀಗಾಗಿ ದ್ವಿಚಕ್ರದಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿ ದೇವತಾ ಆಯತಪ್ಪಿ ಬಿದ್ದಿದ್ದಾಳೆ. ಇದರಿಂದ ಆಕ್ಸಿಡೆಂಟ್‌ ಆಗಿದೆ ಎಂದು ಕುಟುಂಬದವರ ಹೇಳಿಕೆ.

Comments are closed.