E-Commerce: ಪಾಕ್‌ ಧ್ವಜವಿರುವ ವಸ್ತು ಮಾರಬೇಡಿ: ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಸೂಚನೆ

Share the Article

E-commerce: ಪಾಕಿಸ್ತಾನ ಧ್ವಜವಿರುವ ವಸ್ತುಗಳನ್ನು ತಮ್ಮ ಫ್ಲಾಟ್‌ಫಾರ್ಮ್‌ಗಳಿಂದ ತೆಗೆದು ಹಾಕುವಂತೆ ಅಮೆಜಾನ್, ಪ್ಲಿಪ್‌ಕಾರ್ಟ್ ಸೇರಿದಂತೆ ಹಲವಾರು ಇ-ಕಾಮರ್ಸ್ ಸಂಸ್ಥೆಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚನೆಯಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ( ಸಿಸಿಪಿಎ) ಆದೇಶಿಸಿದೆ.

ಪಾಕಿಸ್ತಾನಿ ಧ್ವಜವಿರುವ ವಸ್ತುಗಳನ್ನು ತೆಗೆಯುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಿಸಿಪಿಎಗೆ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಅಮೆ ಜಾನ್, ಪ್ಲಿಪ್‌ಕಾರ್ಟ್, ಯುಬೈ ಇಂಡಿಯಾ, ಎಟ್ಟಿ,ದಿ ಫ್ಲಾಗ್ ಕಂಪನಿ, ದಿ ಫ್ಲಾಗ್‌ ಕಾರ್ಪೋರೇಷನ್‌ಗೆ ನೋಟಿಸ್‌ ನೀಡಿದೆ. ಈ ಬಗ್ಗೆ ಸಚಿವ ಜೋಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಮಾರಾಟ ಮಾಡದಂತೆ ನೋಟಿಸ್‌ ನೀಡಿದ್ದರೂ ಮಾರಾಟ ಕಂಡುಬರುತ್ತಿದೆ. ಇದನ್ನು ಸಹಿಸುವುದಿಲ್ಲ. ಇ- ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ಅಂತಹ ಎಲ್ಲ ವಸ್ತು ತೆಗೆದುಹಾಕಬೇಕು. ರಾಷ್ಟ್ರೀಯ ಕಾನೂನುಗಳನ್ನು ಪಾಲಿಸಬೇಕು’ ಎಂದಿದ್ದಾರೆ.

Comments are closed.