2nd PUC : ದ್ವಿತೀಯ ಪಿಯುಸಿ ಪರೀಕ್ಷೆ -3ರ ದಿನಾಂಕ ಘೋಷಣೆ

Share the Article

2nd PUC : ದ್ವಿತೀಯ ಪಿಯುಸಿ ಪರೀಕ್ಷೆ-2 (2nd PUC Exam 2 Result 2025) ಫಲಿತಾಂಶ ಪ್ರಕಟವಾಗಿದೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ-3 ರ ದಿನಾಂಕವು ಘೋಷಣೆಯಾಗಿದೆ.

ಹೌದು, ಎರಡನೇ ಪರೀಕ್ಷೆ ಪೂರ್ಣಗೊಂಡ ಹಿನ್ನೆಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರನೇ ಪರೀಕ್ಷೆ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. ಅದರಂತೆ ಇದೇ ಜೂನ್ 9ರಿಂದ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ-3 ನಡೆಯಲಿವೆ. ದ್ವಿತೀಯ ಪಿಯು ಪರೀಕ್ಷೆ-3 ತೆಗೆದುಕೊಳ್ಳುವವರಿಗೂ ಕೂಡ ಯಾವುದೇ ಶುಲ್ಕ ಇರುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

Comments are closed.