Sakaleshpura : ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದೀರಿ, ಫೈನ್ ಕಟ್ಟಿ – ಟ್ರಾಕ್ಟರ್ ನಂಬರ್ ಗೆ ನೋಟಿಸ್ ಕಳಿಸಿದ ಪೊಲೀಸ್ ಇಲಾಖೆ!!

Share the Article

Sakaleshpura : ಹೆಲ್ಮೆಟ್ ಹಾಕದೆ ವಾಹನ ಚಲಾವಣೆ ಮಾಡಿದ್ದೀರಿ ಎಂದು ಟ್ರ್ಯಾಕ್ಟರ್ ನಂಬರಿಗೆ ನೋಟಿಸ್ ನೀಡಿದಂತಹ ವಿಚಿತ್ರ ಪ್ರಕರಣ ಒಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬೆಳಕಿಗೆ ಬಂದಿದೆ.

ಹೌದು, ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದೀರಿ, ₹500 ದಂಡ ಕಟ್ಟಿ, ಕಾನೂನು ಕ್ರಮ ತಪ್ಪಿಸಿಕೊಳ್ಳಿ ಎಂದು ತಾಲ್ಲೂಕಿನ ಯಡೇಹಳ್ಳಿ ಆರ್.ಮಂಜುನಾಥ್ ಅವರಿಗೆ ಪೊಲೀಸ್ ಇಲಾಖೆಯಿಂದ ನೋಟೀಸ್‌ ನೀಡಲಾಗಿದೆ. ಆದರೆ ಅಚ್ಚರಿಯೇನೆಂದರೆ ಮಂಜುನಾಥ್ ಅವರ ಬಳಿ ಬೈಕ್ ಇಲ್ಲ. ಪೊಲೀಸರು ಕಳುಹಿಸಿದ ನೋಟಿಸ್ ನಲ್ಲಿ ಟ್ರ್ಯಾಕ್ಟರ್ ನಂಬರ್ ಅನ್ನು ನಮೂದಿಸಲಾಗಿದೆ. ಅಂದರೆ ಟ್ರ್ಯಾಕ್ಟರ್ ಅನ್ನು ಹೆಲ್ಮೆಟ್ ಹಾಕದೆ ಚಲಾವಣೆ ಮಾಡಿದ್ದೀರಿ ಎಂದು ನೋಟಿಸ್ ಕಳುಹಿಸಿದಂತೆ ಆಗಿದೆ.

ಈ ಸಂಬಂಧ ಮಂಜುನಾಥ ಅವರು ಪ್ರತಿಕ್ರಿಯಿಸಿ ‘ಈ ನಂಬರಿನ ದ್ವಿಚಕ್ರ ವಾಹನವೇ ನಮ್ಮ ಬಳಿ ಇಲ್ಲ, ಆ ದಿನ ಸಕಲೇಶಪುರದಲ್ಲಿಯೇ ಇದ್ದೇನೆ, 6 ತಿಂಗಳಿಂದ ಮೈಸೂರಿಗೆ ಹೋಗಿಲ್ಲ, ಆದರೆ, ನಮ್ಮ ಮನೆಯ ಟ್ರ್ಯಾಕ್ಟರ್‌‌ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಮಾಡಿರುವ ಯಡವಟ್ಟಿಗೆ ನಾನೇಕೆ ದಂಡ ಕಟ್ಟಲಿ, ಬೇಕಾದರೆ ಟ್ರ್ಯಾಕ್ಟರ್ ಓಡಿಸುವಾಗ ಹೆಲ್ಮೆಟ್‌ ಹಾಕಿಕೊಳ್ಳುವೆ. ದಂಡ ಮಾತ್ರ ಕಟ್ಟಲ್ಲ’ ಎಂದು ಪಟ್ಟು ಹಿಡಿದಿದ್ದಾರೆ.

Comments are closed.