Udupi: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನ! ತಾಯಿ ಗಂಭೀರ, ತಂದೆ ಮಗ ಸಾವು!

Udupi: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಮಗ ಸಾವನ್ನಪ್ಪಿ,ತಾಯಿ ಗಂಭೀರವಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮಗ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿರುವ ಬಗ್ಗೆ ತಿಳಿದು ತಂದೆಯೂ ಬಾವಿಗೆ ಹಾರಿದ್ದಾರೆ. ಗಂಡ ಮತ್ತು ಮಗ ಬಾವಿಗೆ ಹಾರಿರುವ ವಿಷಯ ತಿಳಿದ ತಾಯಿಯೂ ಬಾವಿಗೆ ಹಾರಿದ್ದು ಅವರ ಆಕ್ರಂದನ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ.
ಮೃತರನ್ನು ಅಂಕದ ಕಟ್ಟೆ ಪೆಟ್ರೋಲ್ ಬಂಕ್ ಉದ್ಯೋಗಿ ಮಾಧವ ದೇವಾಡಿಗ (56) ಮತ್ತು ಅವರ ಮಗ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ತಾಯಿ ತಾರ ದೇವಾಡಿಗ ಪರಿಸ್ಥಿತಿ ಗಂಭೀರವಾಗಿದೆ.
ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು ಕುಟುಂಬಕ್ಕೆ ಸಾಲಭಾದೆ ಕಾಡುತ್ತಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
Comments are closed.