Death: ಯುವ ಯಕ್ಷಗಾನ ಕಲಾವಿದ ವಿದ್ಯುತ್ ತಂತಿ ತಗಲಿ ದಾರುಣ ಸಾವು!

Share the Article

Death: ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದು ಯುವ ಯಕ್ಷಗಾನ ಕಲಾವಿದನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಕೊಪ್ಪ ಸಮೀಪ ನಡೆದಿದೆ. ರಂಜಿತ್ ಬನ್ನಾಡಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಅಲ್ಲೇ ಸಮೀಪದಲ್ಲಿದ್ದ ಸೂರಾಲು ಮೇಳದ ಯಕ್ಷಗಾನ ಮಳೆಯಿಂದ ರದ್ದಾದ ಕಾರಣ ವಾಪಸ್ಸಾಗುವಾಗ ಆಗುಂಬೆ ಸಮೀಪ ವಿದ್ಯುತ್ ಕಂಬ ತಂತಿ ಮೈ ಮೇಲೆ ಬಿದ್ದಿದೆ.

ಇದರ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಯುವ ಕಲಾವಿದ ರಂಜಿತ ಬನ್ನಾಡಿ ಅವರ ಮೇಲೆ ತಂತಿ ಹರಿದು ತೀವ್ರ ಸ್ವರೂಪದ ಗಾಯಗಳಾಗಿದೆ.

 

ಹಿಂಬದಿ ಸವಾರ ಸ್ತ್ರೀವೇಷಧಾರಿ ವಿನೋಧ ರಾಜ್ ಅದೃಷ್ಟವಷಾತ್ ಪಾರಾಗಿದ್ದಾರೆ. ಕೂಡಲೇ ಸ್ಥಳಿಯರ ಸಹಕಾರದಿಂದ ತುರ್ತುವಾಹನದ ಮೂಲಕ ಮಣಿಪಾಲ ಕೆ.ಎಮ್.ಸಿ ಅಸ್ಪತ್ರೆಗೆ ಸೇರಿಸುವ ಮುನ್ನವೇ ರಂಜಿತ್‌ ಬನ್ನಾಡಿ ಸಾವನ್ನಪ್ಪಿದ್ದಾರೆ.

 

 

 

Comments are closed.