Toilet Blast: ವೆಸ್ಟರ್ನ್ ಟಾಯ್ಲೆಟ್ ಬ್ಲಾಸ್ಟ್ – ಯುವಕನ ಸ್ಥಿತಿ ಗಂಭೀರ, ಶಾಕ್ ನೀಡುತ್ತೆ ಸ್ಫೋಟದ ಕಾರಣ

Toilet Blast : ಗ್ರೇಟರ್ ನೋಯ್ಡಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಒಬ್ಬ ಯುವಕ ಶೌಚಾಲಯ ಬಳಸುತ್ತಿದ್ದಾಗ ಅದೇ ಕ್ಷಣದಲ್ಲಿ ಶೌಚಾಲಯದಲ್ಲಿ ಸ್ಫೋಟ ಸಂಭವಿಸಿ ಆ ಯುವಕ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಹೌದು, ಮನೆಯ ಶೌಚಾಲಯದಲ್ಲಿ ವೆಸ್ಟರ್ನ್ ಟಾಯ್ಲೆಟ್ ಸೀಟ್ ಒಡೆದು 20 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಸೆಕ್ಟರ್ -36 ರ ಮನೆ ಸಂಖ್ಯೆ ಸಿ -364 ರಲ್ಲಿ ನಡೆದಿದೆ. ಈ ಮನೆ ಸುನಿಲ್ ಪ್ರಧಾನ್ ಅವರಿಗೆ ಸೇರಿದೆ. ವರದಿಗಾರನ ಪ್ರಕಾರ, ಸುನಿಲ್ ಪ್ರಧಾನ್ ಅವರ ಮಗ ಆಶು ನಗರ್ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೌಚಾಲಯದಲ್ಲಿದ್ದರು. ವಿಸರ್ಜನೆ ಬಳಿಕ ಆಶು ನಗರ್ ಫ್ಲಶ್ ಆನ್ ಮಾಡಿದ ತಕ್ಷಣ ಸ್ಫೋಟಗೊಂಡಿತು, ಬಳಿಕ ಬೆಂಕಿ ಕಾಣಿಸಿಕೊಂಡಿತು .ಆಶು ಅವರ ಕಿರುಚಾಟದ ಜೊತೆಗೆ ಸ್ಫೋಟದ ಶಬ್ದವನ್ನು ಕೇಳಿದ ಕುಟುಂಬದವರು ಸ್ಥಳಕ್ಕೆ ಓಡಿ ಹೋಗಿದ್ದಾರೆ. ಹೇಗೋ ಆಶು ಅವರನ್ನು ಬೆಂಕಿಯಿಂದ ಹೊರತೆಗೆದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಶು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ತಂದೆ ಸುನಿಲ್ ಪ್ರಧಾನ್ ಅವರು ಘಟನೆಯ ಕುರಿತು ಮಾತನಾಡಿ, “ಸ್ಫೋಟದಿಂದ ಆಶು ಅವರ ಮುಖ ಮತ್ತು ದೇಹಕ್ಕೆ ತೀವ್ರ ಸುಟ್ಟಗಾಯಗಳಾಗಿವೆ. ಅವರನ್ನು ತಕ್ಷಣ ಗ್ರೇಟರ್ ನೋಯ್ಡಾದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (GIMS) ದಾಖಲಿಸಲಾಗಿದ್ದು, ವೈದ್ಯರು ಶೇ. 35 ರಷ್ಟು ಸುಟ್ಟಗಾಯಗಳಾಗಿವೆ ಎಂದು ಖಚಿತಪಡಿಸಿದ್ದಾರೆ” ಎಂದು ತಿಳಿಸಿದರು. ಆಶು ಘಟನೆ ಸಂಭವಿಸಿದಾಗ ಮೊಬೈಲ್ ಫೋನ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುತ್ತಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದು ವಿಚಿತ್ರವೆನಿಸಿದರೂ, ಭಯಾನಕವಾಗಿದ್ದು ಎಲ್ಲಿಯಾದರೂ ಸಂಭವಿಸಬಹುದು. ವಿಶೇಷವಾಗಿ ಹಳೆಯದಾದ ಅಥವಾ ಸರಿಯಾಗಿ ನಿರ್ವಹಿಸದ ಕೊಳಾಯಿ ವ್ಯವಸ್ಥೆಗಳನ್ನು ಹೊಂದಿರುವ ಮನೆಗಳಲ್ಲಿ ಇದು ಸಂಭವಿಸುವ ಸಾಧ್ಯತೆ ಇದೆ.
ವರದಿಯ ಪ್ರಕಾರ, ಸ್ಫೋಟಕ್ಕೆ ವಿದ್ಯುತ್ ಸಮಸ್ಯೆ ಅಥವಾ ಮನೆಯ ಹವಾನಿಯಂತ್ರಣ ಅಥವಾ ಇತರ ಉಪಕರಣಗಳ ಸಮಸ್ಯೆಯೂ ಕಾರಣವಾಗಿರಲಿಲ್ಲ. ಸ್ಫೋಟಕ್ಕೆ ಅನಿರೀಕ್ಷಿತ ಮತ್ತು ಅಪಾಯಕಾರಿ ಕಾರಣವೆಂದರೆ ಮಿಥೇನ್ ಅನಿಲದ ಶೇಖರಣೆ. ನೆರೆಹೊರೆಯವರು ಸೇರಿದಂತೆ ಕುಟುಂಬದವರು, ಮುಚ್ಚಿಹೋಗಿರುವ ಒಳಚರಂಡಿಯಿಂದಾಗಿ ಶೌಚಾಲಯದ ಬಟ್ಟಲಿನಲ್ಲಿ ಮಿಥೇನ್ ಅನಿಲ ಸಂಗ್ರಹವಾಗಿರಬಹುದು ಮತ್ತು ಸಣ್ಣ ಕಿಡಿಯಿಂದಾಗಿ ಅನಿಲ ಹೊತ್ತಿಕೊಂಡು ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣ ತಿಳಿದಿಲ್ಲ.
Comments are closed.