Rain Alert: ಜೂ.5 ರಂದು ರಾಜ್ಯಕ್ಕೆ ಮುಂಗಾರು ಮಳೆ ಆಗಮನ

Rain Alert: ಮುಂಗಾರು ಪ್ರವೇಶ ಜೂನ್ 5 ರಂದು ಕರ್ನಾಟಕಕ್ಕೆ ಪ್ರವೇಶ ಮಾಡಲಿದೆ. ಪೂರ್ವ ಮುಂಗಾರು ರಾಜ್ಯದಲ್ಲಿ ಸುರಿಯಲಾರಂಭಿಸಿದೆ. ಈಗಾಗಲೇ ಭಾರೀ ಮಳೆಯ ಕಾರಣದಿಂದ ರಾಜ್ಯದ 13 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೇ ತಿಂಗಳಲ್ಲಿ ಬೇಸಗೆಯ ಅನುಭವದ ಜೊತೆಗೆ ಮಳೆರಾಯ ಮಳೆಯ ಅನುಭವ ಕೂಡಾ ತಂದಿದೆ. ಇದು ಪೂರ್ವ ಮುಂಗಾರು ಮಳೆಯಾಗಿದೆ. ಜೂನ್ 5 ಕ್ಕೆ ಮುಂಗಾರು ರಾಜ್ಯಕ್ಕೆ ಪ್ರವೇಶ ಮಾಡಲಿದೆ ಎಂದು ವರದಿಯಾಗಿದೆ.
ಬುಧವಾರ ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಳದಿ ಅಲರ್ಟ್ ಘೋಷಣೆಯಾಗಲಿದೆ. ಮೇ 15 ರಂದು ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
Comments are closed.