Kukke Subramanya Temple: ಮಾಜಿ ರೌಡಿಶೀಟರ್‌ ಹರೀಶ್‌ ಇಂಜಾಡಿ ಅಧ್ಯಕ್ಷ ಸ್ಥಾನ; ಜಾಲತಾಣದಲ್ಲಿ ಬಿಜೆಪಿ ಭಾರೀ ಟೀಕೆ: ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಸಚಿವ ಗುಂಡೂರಾವ್

Share the Article

Kukke Subramanya Temple: ರಾಜ್ಯದ ನಂ.1 ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ರೌಡಿಶೀಟರ್‌ ಹರೀಶ್‌ ಗೌಡ ಇಂಜಾಡಿ ಆಯ್ಕೆ ವಿಚಾರದ ಕುರಿತು ಬಿಜೆಪಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿರುವ ಬೆನ್ನಲ್ಲೇ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ನಾನು ಯಾರಿಗೂ ಶಿಫಾರಸು ಪತ್ರ ನೀಡಿಲ್ಲ.

ದೇವಸ್ಥಾನ ಕಮಿಟಿಗೆ ಚುನಾವಣೆ ಮಾಡಿ ಆಯ್ಕೆ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದರ ಕುರಿತು ಮುಜರಾಯಿ ಇಲಾಖೆ ಸಚಿವರ ಜೊತೆ ಮಾತನಾಡುತ್ತೇನೆ. ಚುನಾವಣೆ ಮೂಲಕ ಮಾಡಿದ್ದನ್ನು ನಿಯಮ ಪ್ರಕಾರ ಬದಲಿಸಲು ಆಗಲ್ಲ, ಮೂರು ವರ್ಷ ಅಧಿಕಾರವಧಿ ಇರುತ್ತದೆ. ಅದರ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

 

Comments are closed.