Engineering: ಖಾಸಗಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಮತ್ತಷ್ಟು ದುಬಾರಿ!

Engineering: ಈಗಾಗಲೇ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ಕಂಗಾಲಾಗಿದ್ದು ಇದೀಗ ಖಾಸಗಿ ಅನುದಾನರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಎಂಜಿನಿಯರಿಂಗ್ (Engineering) ಕೋರ್ಸ್ ಮತ್ತಷ್ಟು ದುಬಾರಿ ಆಗುವ ಸಾಧ್ಯತೆ ಇದೆ. ಅಂತಿಮವಾಗಿ ಶೇ 7.5ರಷ್ಟು ಶುಲ್ಕ ಏರಿಕೆ ಮಾಡಲು ಸರಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿದ್ದು ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಹ ಪೋಷಕರಿಗೆ ಹೊರೆ ಹೆಚ್ಚಾಗಲಿದೆ.
ಪರಿಣಾಮವಾಗಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸ್ ದುಬಾರಿಯಾಗಲಿದೆ. ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ ಮತ್ತು ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಜತೆ ಸಭೆ ನಡೆಸಿರುವ ಉನ್ನತ ಶಿಕ್ಷಣ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಪ್ರಸ್ತುತ ಸರ್ಕಾರಿ ಕೋಟಾದ ಸೀಟುಗಳಿಗೆ ಖಾಸಗಿ ಕಾಲೇಜುಗಳ ಶುಲ್ಕ 1.06 ಲಕ್ಷ ರೂ., ಕಾಮೆಡ್-ಕೆ (ಟೈಪ್-1) ಶುಲ್ಕ 1.86 ಲಕ್ಷ ರೂ. ಇವುಗಳು ಶೇ 7.5 ಶುಲ್ಕ ಹೆಚ್ಚಳ ಪ್ರಕಾರ ಕ್ರಮವಾಗಿ ಏರಿಕೆ ಆಗಲಿದ್ದು ಇದು ಇಂಜಿನಿಯರಿಂಗ್ ಕನಸು ಕಾಣುವ ವಿಧ್ಯಾರ್ಥಿಗಳ ಪೋಷಕರಿಗೆ ಇನ್ನಷ್ಟು ಹೊರೆಯಾಗಲಿದೆ. ಸದ್ಯ, ಶುಲ್ಕ ಹೆಚ್ಚಳ ಕ್ರಮಕ್ಕೆ ವಿದ್ಯಾರ್ಥಿಗಳಿಂದ, ವಿದ್ಯಾರ್ಥಿ ಸಂಘಟನೆಗಳಿಂದ ಹಾಗೂ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
Comments are closed.