Mangaluru: ಮಂಗಳೂರು: ಟಿಂಟ್‌ಡ್ ಗ್ಲಾಸ್ ಬಳಸಿ ವಾಹನ ಸಂಚಾರ: 500 ಕ್ಕೂ ಹೆಚ್ಚು ಕಾರುಗಳ ವಿರುದ್ಧ ಕೇಸು!

Share the Article

Mangaluru: ಮಂಗಳೂರು (Mangaluru) ನಗರದ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಬ್ಲಾಕ್ ಫಿಲ್ಮ್, ಸನ್ ಫಿಲ್ಮ್ ಅಥವಾ ಟಿಂಟೆಡ್ ಗ್ಲಾಸ್‌ಗಳನ್ನು ಅಳವಡಿಸಿ ಸಂಚಾರಿಸುವ ವಾಹನಗಳನ್ನು ಪತ್ತೆ ಹಚ್ಚಿ ಕಾರುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಳೆದ 10 ದಿನಗಳಲ್ಲಿ ಅಂದರೆ ಮೇ 2 ರಿಂದ 11 ವರೆಗೆ ಒಟ್ಟು 504 ಕಾರುಗಳ ವಿರುದ್ಧ ಪ್ರಕರಣವನ್ನು ದಾಖಲಿಸಿ ರೂ.2,53,000 ದಂಡ ವಿಧಿಸಲಾಗಿದೆ. ಅಲ್ಲದೇ ವಾಹನಗಳಿಗೆ ಅಳವಡಿಸಿರುವ ಟಿಂಟೆಡ್‌ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕರ್‌ಗಳನ್ನು ವಾಹನ ಚಾಲಕರಿಂದ ತೆಗೆಸಿ ಪೊಲೀಸರು ಸೂಕ್ತ ತಿಳುವಳಿಕೆಯನ್ನು ನೀಡಿದರು.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ವತಿಯಿಂದ ವಿವಿಧ ಕಡೆಗಳಲ್ಲಿ ವಿಶೇಷ ಚೆಕ್‌ಪೋಸ್ಟ್‌ಗಳನ್ನು ತೆರೆದು ವಾಹನಗಳ ತಪಾಸಣೆ ಕಾರ್ಯವನ್ನು ವಾಹನಗಳ ದಾಖಲಾತಿಗಳ ಪರಿಶೀಲನೆಯನ್ನು ನಡೆಸಲಾಯಿತು. ವಿಶೇಷ ಕಾರ್ಯಚಾರಣೆಯು ಮುಂದಿನ ದಿನಗಳಲ್ಲಿ ಮುಂದುವರೆಯಲಿದ್ದು, ಸಾರ್ವಜನಿಕರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಾಹನಗಳ ಗಾಜುಗಳಿಗೆ ಹೆಚ್ಚುವರಿಯಾಗಿ ಟಿಂಟ್‌ಗಳನ್ನು ಅಳವಡಿಸದಂತೆ ತಿಳುವಳಿಕೆ ನೀಡಲಾಯಿತು.

Comments are closed.