San Diego: ‘ಅತ್ಯುತ್ತಮ ಶಿಕ್ಷಕಿ ಅವಾರ್ಡ್’ ಪಡೆದ ಶಿಕ್ಷಕಿ ಜೈಲು ಪಾಲು – ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದಕ್ಕೆ 30 ವರ್ಷ ಶಿಕ್ಷೆ

San Diego: ಈ ಹಿಂದೆ ಲಿಂಕನ್ ಏಕರ್ಸ್(Lincoln Acres)ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಾ ಸಾನ್ ಡಿಯಾಗೋ(San Diego) ಕೌಂಟಿಯ ಅತ್ಯುತ್ತಮ ಶಿಕ್ಷಕರಲ್ಲೊಬ್ಬರೆಂದು ಗೌರವಕ್ಕೆ ಪಾತ್ರರಾಗಿದ್ದಳು. ಆದರೆ ಇದೀಗ ಈ ಶಿಕ್ಷಕಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 30 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

ಹೌದು, ಕೌಂಟಿಯ ಎಂಬ ಈ ಶಿಕ್ಷಕಿ 12 ವರ್ಷದ ಬಾಲಕನ ಮೇಲೆ ಲೈಂಗಿಕ ದವರಿಗೆ ನಿಯಸಾಗಿದ್ದಾಳೆ ಎಂದು ಆಕೆಯನ್ನು ಜೈಲಿಗೆ ಅಟ್ಟಲಾಗಿದೆ. ಅಂದಹಾಗೆ 12 ವರ್ಷದ ಬಾಲಕನಿಗೆ 10 ತಿಂಗಳ ಕಾಲ ಪ್ರೇಮ ಪತ್ರಗಳು ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಆ ಹುಡುಗನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಳು. ಇದನ್ನು ಅರಿತ ಬಾಲಕನ ತಾಯಿ ಅಧಿಕಾರಿಗಳಿಗೆ ದೂರು ನೀಡಿದರು. ಸಾಲದೆನ್ನುವಂತೆ ಮಾ, ತರಗತಿಯಲ್ಲೇ ಮೂರು ತಿಂಗಳ ಕಾಲ ಆ ಬಾಲಕನನ್ನು ಲೈಂಗಿಕವಾಗಿ ಶೋಷಿಸಿದ್ದಳು.
ಅದಲ್ಲದೆ, ಹಲವು ವರ್ಷಗಳ ಹಿಂದೆ ಮಾ ಅವರು 11 ವರ್ಷದ ಮತ್ತೊಬ್ಬ ಬಾಲಕನನ್ನ ಕೂಡ ಉಡುಗೊರೆಗಳು, ಆಹಾರ ಮೂಲಕ ತನ್ನ ಕಡೆ ಆಕರ್ಷಿಸಿದ್ದಳು ಎಂದು ಆರೋಪಿಸಲಾಗಿದೆ.
ಇದೀಗ ವಿಚಾರಣೆ ವೇಳೆ ಜಾಕ್ವೆಲಿನ್ ಮಾ ತನ್ನ ಕುಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಮಕ್ಕಳ ಮೇಲೆ ಅತ್ಯಂತ ಭೀಕರ ಮತ್ತು ಹಿಂಸಾತ್ಮಕವಾಗಿ ದೌರ್ಜನ್ಯ ಎಸಗಿದ್ದಾಳೆ. ಈಕೆಯ ಈ ಹೀನ ಕೃತ್ಯಕ್ಕೆ ಬಲಿಯಾದವರು ಜೀವನ ಪೂರ್ತಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಈಕೆಗೆ30ವರ್ಷ ಶಿಕ್ಷೆ ಸೂಕ್ತ ಎಂದು ಜಿಲ್ಲಾಅಟಾರ್ನಿ ಸಮರ್ ಸ್ಟೀಫನ್ ಹೇಳಿದ್ದಾರೆ.
Comments are closed.