Rakesh Poojary Death: ʼಕಾಂತಾರ: ಚಾಪ್ಟರ್‌ 1′ ಶೂಟ್‌ ಮುಗಿಸಿ ಬಂದಿದ್ದ ರಾಕೇಶ್‌ಗೆ ರಾತ್ರಿ ಹೃದಯಾಘಾತ

Share the Article

Rakesh Poojary Death: ಕಾಮಿಡಿ ಕಿಲಾಡಿಗಳು ಸೀಸನ್‌ 3 ರ ವಿಜೇತ ರಾಕೇಶ್‌ ಪೂಜಾರಿ ಹೃದಯಾಘಾತದಿಂದ ನಿಧನ ಹೊಂದಿದ್ದು, ಇವರ ಸಾವು ರಂಗಭೂಮಿ, ಸಿನಿಮಾಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಮೇ 11 ರ ಬೆಳಿಗ್ಗೆ ರಿಷಬ್‌ ಶೆಟ್ಟಿ ನಿರ್ದೇಶನದ ʼಕಾಂತಾರ: ಚಾಪ್ಟರ್‌ 1″ ರ ಶೂಟ್‌ನಲ್ಲಿ ಇದ್ದರು. ಮಧ್ಯರಾತ್ರಿ ಅವರಿಗೆ ಸಾವು ಸಂಭವಿಸಿದೆ ಎಂದು ಟಿವಿ9ಗೆ ರಾಕೇಶ್‌ ಪೂಜಾರಿ ಅವರ ಆಪ್ತ ನಟ ಗೋವಿಂದೇ ಗೌಡ (ಜಿಜಿ) ಹೇಳಿರುವ ಕುರಿತು ವರದಿಯಾಗಿದೆ.

ʼಬೆಳಿಗ್ಗೆ ಕಾಂತಾರ ಸಿನಿಮಾ ಶೂಟ್‌ನಲ್ಲಿ ಇದ್ದ. ಶೂಟ್ ಮುಗಿಸಿ ಸಂಜೆ ಗೆಳೆಯರ ಮದುವೆ ಫಂಕ್ಷನ್​ಗೆ ಹೋಗಿದ್ದಾನೆ. ಸುಸ್ತು ಎನ್ನುತ್ತಿದ್ದ. ಮಧ್ಯರಾತ್ರಿ ಹಾರ್ಟ್​ ಅಟ್ಯಾಕ್ ಆಯ್ತು. ಎಲ್ಲರೂ ನನಗೆ ಕಾಲ್ ಮಾಡಿದ್ದರು. ಆದರೆ ಮೊಬೈಲ್ ಸೈಲೆಂಟ್​ನಲ್ಲಿ ಇದ್ದಿದ್ದರಿಂದ ವಿಷಯ ಗೊತ್ತಾಗಿರಲಿಲ್ಲ. ಬೆಳಿಗ್ಗೆ ಎದ್ದು ನೋಡಿದಾಗ ವಿಷಯ ತಿಳಿಯಿತು’ ಎಂದಿದ್ದಾರೆ ಜಿಜಿ ಎಂದು ಟಿವಿ9 ವರದಿ ಮಾಡಿದೆ.

ರಾಕೇಶ್‌ಗೆ ತಂದೆಯೂ ಇಲ್ಲ. ರಾಕೇಶ್‌ ನಿಧನ ವಾರ್ತೆ ಇನ್ನೂ ತಾಯಿಗೆ ದೊರಕಿಲ್ಲ ಎನ್ನಲಾಗಿದೆ.

Comments are closed.