Government Employees: ಸರಕಾರಿ ನೌಕರರಿಗೆ ಗುಡ್‌ನ್ಯೂಸ್: ಸಿಗಲಿದೆ 42 ದಿನಗಳ ಹೆಚ್ಚುವರಿ ರಜೆ

Government Employees: ಕೇಂದ್ರ ಸರಕಾರವು ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕೇಂದ್ರ ಸರಕಾರವು ಸರಕಾರಿ ನೌಕರರಿಗೆ ಪ್ರತಿ ವರ್ಷವೂ 42 ಹೆಚ್ಚುವರಿ ರಜೆಗಳನ್ನು ನೀಡಲಾಗಿದೆ. ಹೌದು, ಒಂದಲ್ಲ ಎರಡಲ್ಲ ಭರ್ಜರಿ 42 ದಿನಗಳ ಕಾಲ ರಜೆ ಸಿಗಲಿದೆ. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯದ ಹೊಸ ನೀತಿ ಜಾರಿ ಮಾಡಲಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸರಕಾರಿ ನೌಕರರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ್ದು, ಕಠಿಣ ಶ್ರಮ ಹಾಕಿದ್ದಾರೆ. ಮುಂದುವರಿದು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿದ್ದಾರೆ. ಕುಟುಂಬದೊಂದಿಗೆ ಅವರು ಸಮಯವನ್ನು ಕಳೆಯುವುದು ಅವಶ್ಯಕತೆ ಇದೆ ಎಂದು ಪರಿಗಣಿಸಿ ಈ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರಕಾರವು 2025 ರ ಜುಲೈ 1 ರಿಂದ ಹೊಸ ರಜೆ ನೀತಿಯನ್ನು ಜಾರಿಗೆ ತರಲಿದೆ ಎಂದು ವರದಿಯಾಗಿದೆ.
ಯಾವೆಲ್ಲ ಸರಕಾರಿ ನೌಕರರಿಗೆ ರಜೆ ಅನ್ವಯ?
ಈ ರಜೆ ಕಾಯಂ ಸರಕಾರಿ ನೌಕರರು ಹಾಗೂ ಒಂದು ವರ್ಷದ ಸೇವೆ ಪೂರ್ಣ ಮಾಡಿರುವವರಿಗೆ ಮಾತ್ರ ಅನ್ವಯವಾಗಲಿದೆ. ಅರೆಕಾಲಿಕ ನೌಕರರು, ಗುತ್ತಿಗೆದಾರರು ಇಲ್ಲವೇ ತಾತ್ಕಾಲಿಕ ಸಿಬ್ಬಂದಿಗೆ ಈ ಸೌಲಭ್ಯ ಇಲ್ಲ ಎಂದು ಹೇಳಲಾಗಿದೆ. ಇದರೊಂದಿಗೆ ಸಾಮಾನ್ಯ ರಜೆ (cl), ಅರ್ನ್ಡ್ ಲೀವ್ (EL) ಹಾಗೂ ವೈದ್ಯಕೀಯ ರಜೆಗಳೊಂದಿಗೆ 42 ದಿನಗಳ ಹೆಚ್ಚುವರಿ ರಜೆ ಸಿಗಲಿದೆ ಎಂದು ವರದಿಯಾಗಿದೆ.
Comments are closed.