KS Eshwarappa: ಕುತ್ತಿಗೆ ಕೊಯ್ದರು ಹೊಸ ಪಕ್ಷ ಕಟ್ಟಲ್ಲ, ಬೇರೆ ಪಕ್ಷಕ್ಕೆ ಹೋಗಲ್ಲ – ಈಶ್ವರಪ್ಪ ಘೋಷಣೆ

K S Eshwarappa: ಲೋಕಸಭಾ ಚುನಾವಣೆ ವೇಳೆ ಮಗನಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಪಕ್ಷ ತೊರೆದು, ಪಕ್ಷೇತರವಾಗಿ ಸ್ಪರ್ಧಿಸಿದ್ದ ಈಶ್ವರಪ್ಪನವರ ಸ್ಥಿತಿ ಇದೀಗ ಅತಂತ್ರವಾಗಿದೆ. ಆಗೊಮ್ಮೆ ಈಗೊಮ್ಮೆ ಮಾಧ್ಯಮಗಳ ಮುಂದೆ ಕಾಣಿಸುವ ಈಶ್ವರಪ್ಪನವರು(K S Eshwarappa) ಕೆಲವೊಂದು ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅವರು ಹೊಸ ಪಕ್ಷ ಕಟ್ಟುವ ಹಾಗೂ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಹೌದು ವಿಜಯಪುರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಈಶ್ವರಪ್ಪನವರು ನನ್ನ ಕುತ್ತಿಗೆ ಕೊಯ್ದರು ಪರವಾಗಿಲ್ಲ ನಾನು ಹೊಸ ಪಕ್ಷ ಕಟ್ಟುವುದಿಲ್ಲ ಹಾಗೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಖಂಡಿತ ಹೇಳಿದ್ದಾರೆ.
ಅಲ್ಲದೆ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುತ್ತಾರೋ ಇಲ್ಲವೋ ಗೊತ್ತಿಲ್ಲ. ಅದನ್ನು ಅವರಿಗೆ ಕೇಳಬೇಕು. ನಾನು ಮಾತ್ರ ಯಾವ ಪಕ್ಷ ಕಟ್ಟುವುದಿಲ್ಲ, ನನ್ನ ಕುತ್ತಿಗೆ ಕೊಯ್ದರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
Comments are closed.