Beer Rate: ಮದ್ಯಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ – ಕೇಂದ್ರದಿಂದ ಬಿಯರ್ ಬೆಲೆಯಲ್ಲಿ ಶೇ 25 ರಷ್ಟು ಇಳಿಕೆ !!

Beer Rate: ದೇಶಾದ್ಯಂತ ಮದ್ಯಪ್ರಿಯರಿಗೆ ಸರ್ಕಾರಗಳು ಒಂದಲ್ಲ ಒಂದು ಶಾಕ್ ನೀಡುತ್ತಲೇ ಇದ್ದವು. ಬೆಲೆ ಏರಿಕೆ ಬಿಸಿಯಂತೂ ಮಧ್ಯಪ್ರಿಯರ ತಲೆ ಕೆಡಿಸಿತ್ತು. ಅದರಲ್ಲೂ ಕರ್ನಾಟಕದ ಮದ್ಯಪ್ರಿಯರ ಪಾಡಂತೂ ಹೇಳತಿರದು. ಯಾಕೆಂದರೆ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಮೂರ್ನಾಲ್ಕು ಬಾರಿ ಮಧ್ಯದ ದರದಲ್ಲಿ ಏರಿಕೆ ಮಾಡಿ ದೊಡ್ಡ ಅಘಾತವನ್ನೇ ನೀಡಿತ್ತು. ಆದರೆ ಇದೀಗ ಮದ್ಯಪ್ರಿಯರಿಗೆ ಕೇಂದ್ರ ಸರ್ಕಾರವು ಸಂತೋಷದ ಸುದ್ದಿ ಒಂದನ್ನು ಕಳುಹಿಸಿದೆ.

ಹೌದು, ಇದೀಗ ಕೇಂದ್ರದಿಂದ ಮದ್ಯ ಪ್ರಿಯರು ಸಂತೋಷಪಡುವ ಖುಷಿಯ ವಿಚಾರವೊಂದು ಬಂದಿದೆ. ತೆರಿಗೆ ಕಾರಣದಿಂದಾಗಿ ಬಿಯರ್ ಬೆಲೆಯು ಭರ್ಜರಿ ಇಳಿಕೆಯಾಗುತ್ತಿದೆ. ಬೆಲೆ ಕಡಿತ ಎಂದರೆ ಒಂದೆರಡು ರೂಪಾಯಿಯಲ್ಲ ಬರೋಬ್ಬರಿ ಶೇಕಡ 25ರಷ್ಟು ಕಡಿಮೆಯಾಗುವ ಸಂಭವ ಇದೆ.
ಬಿಯರ್ ದರದಲ್ಲಿ ಇಳಿಕೆ ಏಕೆ?
ಭಾರತ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಅಮೆರಿಕ ಹಾಗೂ ಬ್ರಿಟನ್‌ಗೆ ಸಂಬಂಧಿಸಿದಂತೆ ಟ್ಯಾಕ್ಸ್ ವಿಚಾರದಲ್ಲಿ ಕೆಲವೊಂದು ವಿನಾಯಿತಿಯನ್ನು ನೀಡಿದ್ದು ಇದು ಭಾರೀ ಲಾಭವನ್ನು ತಂದುಕೊಟ್ಟಿದೆ. ಈ ಬೆಳವಣಿಗೆ ಪರೋಕ್ಷವಾಗಿ ದೇಶದಲ್ಲಿ ಬಿಯರ್ ಬೆಲೆ ಇಳಿಕೆಗೆ ಕಾರಣವಾಗಿದೆ. ದೇಶದಲ್ಲಿ ಕೆಲವು ನಿರ್ದಿಷ್ಟ ಬ್ರ್ಯಾಂಡ್‌ಗಳ ಬಿಯರ್ ಬೆಲೆ ಭರ್ಜರಿ ಇಳಿಕೆಯಾಗಲಿದೆ. ಇದು ಬಿಯರ್ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ.
ಬ್ರಿಟನ್ ಮೂಲದ ಕಂಪನಿಗಳಿಂದ ತಯಾಗಿರುವ ಬ್ರಾಂಡ್‌ಗಳ ಮೇಲೆ ಶೇ.150ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರವು ವಿಧಿಸುತ್ತಿತ್ತು. ಇದೀಗ ಭಾರತದಲ್ಲಿ ತೆರಿಗೆ ಪ್ರಮಾಣವನ್ನು ಇಳಿಸಲಾಗಿದೆ. ಇನ್ಮುಂದಿನ ದಿನಗಳಲ್ಲಿ ಬ್ರಿಟನ್‌ನ ಬಿಯರ್ ಬ್ರ್ಯಾಂಡ್‌ಗಳ ಮೇಲೆ ಶೇ 75ರಷ್ಟು ತೆರಿಗೆ ಕಡಿಮೆ ಮಾಡಲು ಭಾರತೀಯ ಸರ್ಕಾರವು ಮುಂದಾಗಿದೆ. ಇದು ಬಿಯರ್ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ ಅಂತಲೇ ಹೇಳಲಾಗುತ್ತಿದೆ. ಬ್ರಿಟಿಷ್ ಸ್ಕಾಚ್ ಸೇರಿದಂತೆ ವಿವಿಧ ಮದ್ಯಗಳ ಮೇಲಿನ ತೆರಿಗೆಯು ಇಳಿಕೆಯಾಗಿರುವುದರಿಂದ ಬಿಯರ್ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.
Comments are closed.