Rakesh Poojary Death: ಕಾಮಿಡಿ ಕಿಲಾಡಿಗಳು-3 ರ ವಿಜೇತ ರಾಕೇಶ್ ಪೂಜಾರಿಯ ಬಾಲ್ಯ, ಶಿಕ್ಷಣ, ಸಿನಿಮಾ ಜರ್ನಿ ಕುರಿತ ಮಾಹಿತಿ ಇಲ್ಲಿದೆ!

Rakesh Poojary Death: ತನ್ನ ಹಾಸ್ಯನಟನೆಯ ಮೂಲಕ ರಂಗಭೂಮಿ, ಕಿರುತೆರೆ, ಸಿನಿಮಾದಲ್ಲಿ ತನ್ನ ಪ್ರತಿಭೆಯನ್ನು ಮೆರೆದ ನಟ ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ (34) ಇಂದು ನಸುಕಿನ ವೇಳೆ ಮೃತಪಟ್ಟಿದ್ದಾರೆ. ಲೋ ಬಿಪಿ ಸಮಸ್ಯೆ ಕಾಡಿದ್ದು, ಪಲ್ಸ್ ರೇಟ್ ಕಡಿಮೆಯಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ರಾಕೇಶ್ ಪೂಜಾರಿ ಮೃತ ಹೊಂದಿದ್ದಾರೆ.

ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ ರಾಕೇಶ್ ಪೂಜಾರಿ. ತಮ್ಮ ಶೈಕ್ಷಣಿಕ ಶಿಕ್ಷಣವನ್ನು ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದ ಇವರು ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಕಡ್ಲೆ ಬಜಿಲು ಎಂಬ ತುಳು ಕಾರ್ಯಕ್ರಮದಲ್ಲಿ ನಟನೆ ಮಾಡಿದ್ದರು.
ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನಡದಲ್ಲಿ ಮತ್ತು ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳುವಿನಲ್ಲಿ ಮಾಡಿದ ನಾಟಕಗಳು, ಹಾಗೂ ಚಲನಚಿತ್ರಗಳಲ್ಲಿ ಕೂಡಾ ನಟಿಸಿದ್ದಾರೆ. ಬಲೆ ತೆಲಿಪಾಲೆ, ಮೇ 22, ಸ್ಟಾರ್, ತೂಯಿನಾಲೆ ಪೋಯೆ ಮುಂತಾದ ಕರಾವಳಿಯ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ.
ರಾಕೇಶ್ ʼಕಾಮಿಡಿ ಕಿಲಾಡಿಗಳುʼ ಸೀಸನ್ 3 ರ ವಿಜೇತರಾಗಿ ಗಮನ ಸೆಳೆದಿದ್ದರು. ರಾಕೇಶ್ ಅವರ ಅಗಲಿಕೆ ಕನ್ನಡ ರಂಗಭೂಮಿ, ಕಿರುತೆರೆಗೆ ಅಪಾರ ನಷ್ಟ ಉಂಟುಮಾಡಿದೆ. ರಾಕೇಶ್ ಪೂಜಾರಿ ನಿಧನದ ಕುರಿತು ನಟಿ ರಕ್ಷಿತಾ ಪ್ರೇಮ್ ಅವರು, ʼ ಮಿಸ್ ಯೂ ಮಗನೇ…ನಾನು ಇನ್ಯಾವತ್ತೂ ನಿನ್ನ ಜೊತೆ ಮಾತನಾಡಲು ಆಗಲ್ಲ. ಕಾಮಿಡಿ ಕಿಲಾಡಿ ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ, ನೀನು ಅದರಲ್ಲಿ ಒಂದು ಶಕ್ತಿ ಆಗಿದ್ದೆ. ನಿನ್ನಂತಹ ಅದ್ಭುತ ವ್ಯಕ್ತಿ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆʼ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Comments are closed.