SSLC : ಎಸೆಸೆಲ್ಸಿ ಪರೀಕ್ಷೆ – ಉತ್ತರ ಪತ್ರಿಕೆ ಸ್ಕ್ಯಾನ್ ಕಾಪಿ ವಿತರಣೆಯಲ್ಲೂ ಸ್ಮಾಮ್?

SSLC: SSLC ಪರೀಕ್ಷೆ ರಿಸಲ್ಟ್ ಬಂದ ಬಳಿಕ ಮರುಮೌಲ್ಯ ಮಾಪನಕ್ಕೆ ಮುಂದಾಗಿರುವ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಯಾಗಿದೆ. ಬೋರ್ಡ್ ಯಡವಟ್ಟಿಗೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
SSLC ಉತ್ತರ ಪತ್ರಿಕೆ ಸ್ಕ್ಯಾನ್ ಮಾಡದೇ ಮೊಬೈಲ್ ಪೋಟೋ ಅಪ್ ಲೋಡ್ ಮಾಡಿದ್ದು, ಸರಿಯಾಗಿ ಉತ್ತರ ಪತ್ರಿಕೆ ಕಾಣದೇ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.
ಉತ್ತರ ಪತ್ರಿಕೆಗಾಗಿ ವಿದ್ಯಾರ್ಥಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ಶಾಲಾ ಪರೀಕ್ಷಾ ಮಂಡಳಿ ಮಹಾ ಯಡವಟ್ಟು ಬಯಲಾಗಿದೆ. ಮರು ಏಣಿಕೆಗೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಕಳಿಸಿರುವ ಉತ್ತರ ಪತ್ರಿಕೆ ಫೋಟೋ ಬ್ಲರ್ ಆಗಿದೆ. ಹಲವೆಡೆ ಸ್ಪೂಡೆಂಟ್ಸ್ ಗೆ ಇದೇ ಪರಿಸ್ಥಿತಿ ಆಗಿದೆ. ಸ್ಪೂಡೆಂಟ್ ಬರೆದಿರೋದು ಸರಿಯಾಗಿ ಕಾಣಿಸುತ್ತಿಲ್ಲ. ಇಂತಹ ಉತ್ತರ ಪ್ರತಿ ಅಪ್ ಲೋಡ್ ಮಾಡಿದರೆ ವಿದ್ಯಾರ್ಥಿಗಳಿಗೆ ಹೇಗೆ ಕಾಣಿಸುತ್ತದೆ.? ಎಂಬುದೇ ಪ್ರಶ್ನೆಯಾಗಿದೆ.
Comments are closed.