Gorakhpur: ಡುಮ್ಮ ಅಂದಿದ್ದಕ್ಕೆ ಅತಿಥಿಗಳಿಗೆ ಗುಂಡು ಹಾರಿಸಿದ ವ್ಯಕ್ತಿ

Gorakhpur: ತನ್ನನ್ನು ಡುಮ್ಮ, ಬೊಜ್ಜು ಎಂದು ಕರೆದಿದ್ದಕ್ಕೆ ಕೋಪಗೊಂಡ ಯುವಕ, ಇಬ್ಬರು ಅತಿಥಿಗಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ ಮಾಡಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ (Gorakhpur) ಜಿಲ್ಲೆಯಲ್ಲಿ ನಡೆದಿದೆ.
ಖಜ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ಸಂಬಂಧ ಬೆಲ್‌ಘಾಟ್ ಪ್ರದೇಶದ ನಿವಾಸಿ ಆರೋಪಿ ಅರ್ಜುನ್ ಚೌಹಾಣ್ ಎಂಬಾತನನ್ನು ಬಂಧನ ಮಾಡಿದ್ದಾರೆ.
ಘಟನೆ ವಿವರ:
ಅರ್ಜುನ್ ಇತ್ತೀಚೆಗೆ ತನ್ನ ಚಿಕ್ಕಪ್ಪನ ಜೊತೆ ದೇವಸ್ಥಾನದಲ್ಲಿ ನಡೆಯುತ್ತಿದ್ದ ಔತಣಕೂಟಕ್ಕೆ ಹೋಗಿದ್ದ. ಈ ಸಂದರ್ಭದಲ್ಲಿ ಅನಿಲ್ ಚೌಹಾಣ್, ಶುಭಮ್ ಚೌಹಾಣ್ ಎಂಬ ಇಬ್ಬರು ಅತಿಥಿಗಳು ತನ್ನನ್ನು ಡುಮ್ಮ, ಬೊಜ್ಜು ಅಂತ ಅಪಹಾಸ್ಯ ಮಾಡುತ್ತಿದ್ದು, ಕೋಪಗೊಂಡ ಅರ್ಜುನ್ ತನ್ನ ಸ್ನೇಹಿತ ಆಸಿಫ್ ಖಾನ್ ಜೊತೆಗೆ ಆ ಇಬ್ಬರು ಅತಿಥಿಗಳನ್ನು ಹಿಂಬಾಲಿಸಿ ಗೋರಖ್‌ಪುರದ ತೆನುವಾ ಟೋಲ್ ಪ್ಲಾಜಾ ಬಳಿ ಕಾರು ನಿಲ್ಲಿಸಿ, ಇಬ್ಬರನ್ನೂ ಹೊರಗೆಳೆದು ಗುಂಡು ಹಾರಿಸಿ ಪರಾರಿಯಾಗಿದ್ದ ಎಂದು ದಕ್ಷಿಣ ಎಸ್ಪಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
Comments are closed.