Cocaine: 5 ಲಕ್ಷಕ್ಕೆ ಕೊಕೇನ್‌ ಖರೀದಿ ಮಾಡಿದ ಹೈದರಾಬಾದ್‌ ಆಸ್ಪತ್ರೆ ಸಿಇಓ; ಪೊಲೀಸರಿಂದ ಅರೆಸ್ಟ್‌

Share the Article

Cocaine: ಹೈದರಾಬಾದ್‌ ಆಸ್ಪತ್ರೆಯೊಂದರ ಸಿಇಓ 5 ಲಕ್ಷ ಮೌಲ್ಯದ ಕೊಕೇನ್‌ ಖರೀದಿಸುವ ಸಮಯದಲ್ಲಿ ರೆಡ್‌ಹ್ಯಾಂಡಾಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ನಮ್ರತಾ ಧಕ್ಕರ್‌ ಹೈದರಾಬಾದ್‌ ಸಿಇಓ ಆಗಿದ್ದು, ಈಕೆ ವಾಟ್ಸಪ್‌ ಮೂಲಕ ಸಂಪರ್ಕ ಮಾಡಿ ಐದು ಲಕ್ಷ ರೂ. ಕೋಕೇನ್‌ ಆರ್ಡರ್‌ ಮಾಡಿದ್ದಳು. ಆನ್‌ಲೈನ್‌ನಲ್ಲಿ ಹಣ ಕೂಡಾ ವರ್ಗಾವಣೆ ಮಾಡಿದ್ದಳು. ನಂತರ ಧಕ್ಕರ್‌ ಬಾಲಕೃಷ್ಣ ಎಂಬ ವ್ಯಕ್ತಿ ಮೂಲಕ ಡ್ರಗ್ಸ್‌ ಡೀಲ್‌ ಮಾಡಲು ಹೇಳಿದ್ದ. ರಾಯದುರ್ಗಂಗೆ ಡ್ರಗ್ಸ್‌ ಕೊಡೋದಕ್ಕೆಂದು ಬಾಲಕೃಷ್ಣ ಬಂದಾಗ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಬಂಧಿತರದಿಂದ 10,000 ರೂ. ನಗದು, 53 ಗ್ರಾಂ ಕೊಕೇನ್‌ ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮ್ರತಾ ಡ್ರಗ್ಸ್‌ಗಾಗಿ ಸುಮಾರು 70ಲಕ್ಷ ರೂ ಖರ್ಚು ಮಾಡಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ.

Comments are closed.