Education: ಎಸ್.ಎಸ್.ಎಲ್.ಸಿ ಪರೀಕ್ಷೆ-2 : ಶುಲ್ಕ ವಿನಾಯಿತಿ

Share the Article

Education: 2025 ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಮೇ 26ರಿಂದ ಜೂನ್ 2 ರ ವರೆಗೆ ಪರೀಕ್ಷೆ-2 ಅನ್ನು ನಡೆಸಲಾಗುತ್ತಿದ್ದು, ಸದ್ರಿ ಪರೀಕ್ಷೆಗೆ ನೋಂದಾವಣೆಯಾಗುವ ವಿದ್ಯಾರ್ಥಿಗಳಿಗೆ ಪ್ರಪ್ರಥಮ ಬಾರಿಗೆ ಶುಲ್ಕ ವಿನಾಯಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ನೀಡಲಾಗುತ್ತಿದೆ.

 

ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮೇ 10 ಕೊನೆಯ ದಿನವಾಗಿದ್ದು, 2025 ರಲ್ಲಿ ದೀರ್ಘ ಗೈರು ಹಾಜರಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆ -1 ಕ್ಕೆ ಗೈರು ಹಾಜರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಖಾಸಗಿ ವಿದ್ಯಾರ್ಥಿಗಳಾಗಿ ಪರೀಕ್ಷೆ-2 ಕ್ಕೆ ಬರೆಯಲು ಅವಕಾಶವಿರುತ್ತದೆ. ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರಲ್ಲಿ ಉತ್ತೀರ್ಣರಾಗದ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ-2 ಕ್ಕೆ ಶುಲ್ಕ ವಿನಾಯಿತಿ ನೀಡಿರುವ ಸಂಬಂಧ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಆಡಳಿತ) ಕಚೇರಿ ಪ್ರಕಟಣೆ ತಿಳಿಸಿದೆ.

Comments are closed.