pulwama Attack : ಪುಲ್ವಾಮಾ ಅಟ್ಯಾಕ್ ತನ್ನದೇ ಕೃತ್ಯ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್

Share the Article

Pulwama Attack: ಸುಮಾರು ಐದು ವರ್ಷಗಳ ಹಿಂದೆ ಭಾರತದ ಮೇಲೆ ನಡೆಸಿದ ಪುಲ್ವಾಮ ಅಟ್ಯಾಕ್ ತನ್ನದೇ ಕೃತ್ಯ ಎಂದು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ.

ಫೆ.14, 2019ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬರ್‌ನಿಂದ ಭಯೋತ್ಪಾದಕ ದಾಳಿಯನ್ನು ನಡೆಸಲಾಗಿತ್ತು. ಆ ಸ್ಫೋಟದಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಜೈಶ್-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾದ ಆತ್ಮಹತ್ಯಾ ಬಾಂಬರ್ ತನ್ನ ವಾಹನವನ್ನು ಸಿಆರ್‌ಪಿಎಫ್ ಬೆಂಗಾವಲು ಪಡೆಯ ಬಸ್‌ಗೆ ಡಿಕ್ಕಿ ಹೊಡೆದು ಸ್ಫೋಟಿಸಿದ್ದ.

ಇದೀಗ ಪುಲ್ವಾಮಾ ದಾಳಿ ತನ್ನದೇ ಕೃತ್ಯ ಎಂದು ಪಾಕ್ ವಾಯು ಪಡೆಯ ಮುಖ್ಯಸ್ಥ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡಿರುವ ವಿಡಿಯೋ ಹರಿದಾಡುತ್ತಿದೆ. ಒಟ್ಟಿನಲ್ಲಿ ಭಯೋತ್ಪಾದಕ ದಾಳಿ ನಮ್ಮ ಯುದ್ಧತಂತ್ರದ ಪ್ರತಿಭೆಯ ಭಾಗ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಮುಂದೆಯೇ ಪಾಕ್ ಬಾಯಿಬಿಟ್ಟಿದೆ.

Comments are closed.