Uppinangady : ಕಟ್ಟಿಗೆ ಕೊಂಡೊಯ್ಯುವ ವಿಚಾರಕ್ಕೆ ಜಗಳ – ಚಾಕುವಿನಿಂದ ಇರಿದು ಯುವಕನ ಕೊಲೆ

Share the Article

Uppinangady : ಕಟ್ಟಿಗೆ ಕೊಂಡೊಯ್ಯುವ ವಿಚಾರಕ್ಕೆ ಕುಟುಂಬ ಒಂದರ ಮಧ್ಯೆ ಜಗಳ ನಡೆದಿದ್ದು ದೊಣ್ಣೆಯಿಂದ ಹೊಡೆದು ದೊಡ್ಡಪ್ಪನ ಮಗನನ್ನೇ ಕೊಲೆ ಮಾಡಿರುವ ಅಚ್ಚರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನೆಲ್ಯಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮಾದೇರಿ ನಿವಾಸಿ ಗಂಗಪ್ಪ ಗೌಡ ಅವರ ಪುತ್ರ ಶರತ್ ಕುಮಾರ್ (37) ಕೊಲೆಯಾದವರು. ಶರ‌ತ್‌ ಅವರ ಚಿಕ್ಕಪ್ಪ ಜನಾರ್ದನ ಗೌಡ ಅವರ ಪುತ್ರ ಹರಿಪ್ರಸಾದ್ ಆರೋಪಿ ಎನ್ನಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು?
ಶರತ್ ಅವರ ಪೋಷಕರು, ಸಹೋದರ ಉಪ್ಪಿನಂಗಡಿಯಲ್ಲಿ ವಾಸ್ತವ್ಯವಿದ್ದು, ಮಾದೇರಿಯಲ್ಲಿ ಶರತ್‌ ಮಾತ್ರ ವಾಸವಿದ್ದರು. ಶರತ್, ಜನಾರ್ದನ ಅವರ ಮನೆ ಅಕ್ಕಪಕ್ಕದಲ್ಲೇ ಇದ್ದು, ಅವರ ಮಧ್ಯೆ ಕೆಲವು ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗುತ್ತಿತ್ತು.

ಮೇ 8ರಂದು ರಾತ್ರಿ ಶರತ್‌ ಅವರ ಜಾಗದಲ್ಲಿ ಹಾಕಿದ್ದ ಕಟ್ಟಿಗೆಯನ್ನು ಜನಾರ್ದನ ಅವರ ಮನೆಯವರು ಕೊಂಡು ಹೋಗುತ್ತಿದ್ದಾಗ ಶರತ್ ಆಕ್ಷೇಪಿಸಿದ್ದರು. ಈ ವೇಳೆ ಗಲಾಟೆ ನಡೆದಿದೆ. ಮೇ 9ರಂದು ರಾತ್ರಿ ಶರತ್ ಅವರು ಮಾದೇರಿಯಲ್ಲಿರುವ ಜನಾರ್ದನ ಅವರ ಮನೆ ಅಂಗಳದಲ್ಲಿ ನಿಂತು ಅವರ ಪುತ್ರ ಸತೀಶ ಅವರನ್ನು ನಿಂದಿಸುತ್ತಿದ್ದರು.

ಈ ವೇಳೆ ಹರಿಪ್ರಸಾದ್ ಅವರು ಬಂದು ಮರದ ದೊಣ್ಣೆಯಿಂದ ಶರತ್ ಅವರ ತಲೆಗೆ ಹಲ್ಲೆ ನಡೆಸಿದ್ದರು. ಈ ವೇಳೆ ಕುಸಿದು ಬಿದ್ದ ಶರತ್ ಅವರ ತಲೆಗೆ ಮತ್ತೆ ಬಲವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶರತ್ ಅವರ ಸಹೋದರ ಚರಣ್ ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.