U T Khadar: ಸುಹಾಸ್ ಶೆಟ್ಟಿ ಹತ್ಯೆ ತನಿಖೆ ಎನ್‌ಐಎ ಗೆ ಕೊಡಲು ಅಭ್ಯಂತರವಿಲ್ಲ-ಯು.ಟಿ.ಖಾದರ್

U T Khadar: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ತನಿಖೆಯನ್ನು ಎನ್‌ಐಎ ಗೆ ನೀಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ನೀಡುವ ಬೇಡಿಕೆಗಳಿಗೆ ಸರಕಾರ ಸ್ಪಂದಿಸುವ ವಿಶ್ವಸವಿದೆ. ಈ ಕುರಿತು ಆಡಳಿತ ಪಕ್ಷ, ಪ್ರತಿಪಕ್ಷ ಇದೆ ಅವರವರು ಮಾತನಾಡಿಕೊಳ್ಳಲಿ ಎಂದು ಹೇಳಿದರು. ಎನ್‌ಐಎಗೆ ಪ್ರಕರಣದ ತನಿಖೆಯನ್ನು ನೀಡಲು ನಮ್ಮದೇನು ಅಭ್ಯಂತರವಿಲ್ಲ. ಯಾರು ತನಿಖೆ ಮಾಡಬೇಕೆಂದು ಸರಕಾರ ತೀರ್ಮಾನಿಸಲಿ ಎಂದು ಹೇಳಿದರು.
ತಪ್ಪು ಮಾಡಿದ ವ್ಯಕ್ತಿಗಳನ್ನು ಬೆಂಬಲಿಸುವ ವ್ಯಕ್ತಿ ನಾನಲ್ಲ. ಉದ್ವಿಗ್ನ ವಾತಾವರಣ ನಿಯಂತ್ರಿಸಲು ವಿಷಯ ಮುಚ್ಚಿಡದೆ ಸತ್ಯ ಹೇಳಿದ್ದೇನೆ. ನನಗೆ ಸಿಕ್ಕ ಮಾಹಿತಿ ಹೇಳಿದ್ದೇನೆ. ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದಾರೆ. ದೇವರು, ದೇವರಂತ ಕ್ಷೇತ್ರದ ಜನ, ಆಶೀರ್ವದ ಮಾಡುವ ಧಾರ್ಮಿಕ ಮುಖಂಡರು ನಮ್ಮ ಜೊತೆ ಇರುವಾಗ ಟೀಕೆ ಮಾಡುವವರ ಕುರಿತು ನಾನು ಹೆಚ್ಚು ತಲೆ ಕೆಡಿಸುವುದಿಲ್ಲ. ರಾಜಕೀಯವಾಗಿ ಇದನ್ನು ತೆಗೆದುಕೊಂಡು ಹೋಗುವುದು ಅದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ನನ್ನ ಮೇಲೆ ನನಗೆ ವಿಶ್ವಾಸವಿದೆ. ಇಂತಹ ಆರೋಪ ಹೊಸತಲ್ಲ. ಎಲ್ಲರೂ ಸಹ ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಇವರು ಹೇಳುತ್ತಿರುವ ಇವರು ಹೇಳುತ್ತಿರುವ ಕ್ರಿಕೆಟ್ ಮ್ಯಾಚ್ ಗೆ ನನಗೆ ಹೋಗೋದಕ್ಕೆ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಬೇಕು ಎಂದು ನನ್ನ ಆಶಯ ಎಂದು ಹೇಳಿದರು.
Comments are closed.