Robbery: ಮೂಡುಬಿದಿರೆ: ಲ್ಯಾಪ್‌ ಟಾಪ್‌ ಕಳ್ಳತನ: ಓರ್ವನ ಬಂಧನ

Share the Article

Robbery: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 26ರಂದು ಸಂಜೆ 4.00 ಗಂಟೆಯಿಂದ ಏಪ್ರಿಲ್ 28 ರ ಬೆಳಿಗ್ಗೆ. 07.25 ಗಂಟೆಯ ಮದ್ಯಾವಧಿಯಲ್ಲಿ ಮಾರ್ಪಾಡಿ ಗ್ರಾಮದ ಕಡಲಕೆರೆ ಇಂಡಸ್ಟ್ರೀಯಲ್ ಏರಿಯಾದ ವಿಲ್ಕರ್ಟ್ ಎಂಬ ಹೆಸರಿನ ಗೋಡೌನ್ ನ ಶಟರಿನ ಬೀಗವನ್ನು ಮುರಿದು ಗೋಡೌನ ಒಳಗೆ ಪ್ರವೇಶಿಸಿ ಗೋಡೌನ್ ನಲ್ಲಿದ್ದ 2 ಲ್ಯಾಪ್ಟಾಪ್ ಮತ್ತು ನಗದು ಹಣ ಇರುವ ಲಾಕರನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಈ ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಡೌನ್ ನಲ್ಲಿ ಕಳ್ಳತನ ಮಾಡಿದ ಅಂತರ್ ಜಿಲ್ಲಾ ಆರೋಪಿಯಾದ ರಾಯಚೂರು ಚಂದ್ರು( 33 ವ) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯು ಈ ಮೇಲಿನ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡು, ಗೋಡೌನ್ ನಲ್ಲಿ ಕಳ್ಳತನ ಮಾಡಿದ ಎಚ್ ಪಿ ಕಂಪನೀಯ 2 ಲ್ಯಾಪ್ ಟಾಪ್ ಮತ್ತು ಲಾಕರ್ ಹಾಗೂ ಲಾಕರ್ ನಲ್ಲಿದ್ದ ಸುಮಾರು 2,88,000/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಮಹೀಂದ್ರ ಕಂಪನೀಯ ಬೊಲೇರೊ ಪಿಕಪ್ ವಾಹನವನ್ನು ಕೂಡ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಆರೋಪಿಯಿಂದ ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 6,50,000 /- ಆಗಬಹುದು.

Comments are closed.