Delhi: ಹಣ ಪತ್ತೆ ಪ್ರಕರಣ: ನ್ಯಾಯಾಧೀಶ ವರ್ಮಾ ವಾಗ್ದಂಡನೆಗೆ ಸಿಜೆಐ ನ್ಯಾ.ಖನ್ನಾ ಶಿಫಾರಸು

Share the Article

Delhi: ಈ ಹಿಂದೆ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಈಗಿನ ಅಲಹಾ ಬಾದ್ ಹೈಕೋರ್ಟ್ ಜಡ್ಜ್‌ ಯಶವಂತ್ ವರ್ಮಾ ಅವರ ದಿಲ್ಲಿ ಮನೆಯಲ್ಲಿ ಅಪಾರ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರನ್ನು ವಾಗ್ದಂಡನೆಗೆ ಗುರಿಪಡಿ ಸುಪ್ರೀಂನ ಸಿಜೆ ಶಿಫಾರಸು ಮಾಡಿದ್ದಾರೆ.

ನ್ಯಾ| ವರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ನೇಮಿತ ತನಿಖಾ ಸಂಸ್ಥೆ ನೀಡಿರುವ ವರದಿಯನ್ನು ಸಿಜೆಐ ನ್ಯಾ । ಸಂಜೀವ್ ಖನ್ನಾ ರಾಷ್ಟ್ರಪತಿ ದೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಜೊತೆ ಹಂಚಿಕೊಂಡಿದ್ದು, ವಾಗ್ದಂಡನೆಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಾಧೀಶರ ನೇತೃತ್ವದ ತನಿಖಾ ಸಮಿತಿ ನ್ಯಾ| ವರ್ಮಾ ನಿವಾಸದಲ್ಲಿ ಹಣ ಪತ್ತೆಯಾಗಿರುವುದು ದೃಢ ಎಂದು ವರದಿ ಸಲ್ಲಿಸಿತ್ತು. ಈ ಬೆನ್ನಲ್ಲೇ ಸಿಜೆಐ ಖನ್ನಾ ಮೋದಿ, ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವರದಿಯ ಜೊತೆಗೆ ತಮ್ಮ ಪ್ರತಿಕ್ರಿಯೆ ಹಾಗೂ ನಾ| ವರ್ಮಾ ಉತ್ತರವನ್ನೂ ಹಂಚಿಕೊಂಡಿದ್ದಾರೆ.

ಇದರಲ್ಲಿ, ರಾಜೀನಾಮೆ ನೀಡುವಂತೆ ನೀಡಿದ ಸಲಹೆಯನ್ನು ನ್ಯಾ| ವರ್ಮಾ ಪಾಲಿಸದ ಹಿನ್ನೆಲೆಯಲ್ಲಿ ಅವರನ್ನು ವಾಗ್ದಂಡನೆ ಮಾಡುವಂತೆ ಪತ್ರದಲ್ಲಿ ಸಿಜೆಐ ಅವರು ಉಲ್ಲೇಖಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments are closed.