Pakistan : ಪಾಕಿಸ್ತಾನದಿಂದ ಜಮ್ಮು ಕಾಶ್ಮೀರದ ಮೇಲೆ ಕ್ಷಿಪಣಿ ದಾಳಿ -8 ಕ್ಷಿಪಣಿ ಹೊಡೆದುರುಳಿಸಿದ ಭಾರತ!!


Pakistan : ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಯೋತ್ಪಾಕರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಭಾರತ ಈ ದಾಳಿಗೆ ಪ್ರತಿದಾಳಿ ಮಾಡಲು ಪಾಕಿಸ್ತಾನ ಮುಂದಾಗಿದ್ದು ಗುರುವಾರ ಜಮ್ಮುವಿನ ಮೇಲೆ ಕ್ಷಿಪಣಿ ದಾಳಿ ಮಾಡುವ ಪ್ರಯತ್ನ ಮಾಡಿದೆ. ಅದರೀಗ ಪಾಕಿಸ್ತಾನದಿಂದ ಕಳುಹಿಸಲಾದ ಡ್ರೋನ್ಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ.
ಹೌದು, ಜಮ್ಮುವಿನ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ಮಾಡಿದೆ ಎಂದು ವರದಿಯಾಗಿದ್ದು ಎಸ್-400 ವಾಯುರಕ್ಷಣಾ ಪಡೆ 8 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಜಮ್ಮುವಿನ ಹಲವು ಕಡೆ ಸ್ಫೋಟದ ಸದ್ದು ಕೇಳಿಬಂದಿದ್ದು ನಂತರ ಸೈರನ್ಗಳ ಕೂಗು ಕೇಳಿಬಂದಿದೆ. 300 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿರುವ ಕುಪ್ವಾರಾ ಪಟ್ಟಣದಲ್ಲಿಯೂ ಸೈರನ್ಗಳ ಸದ್ದು ಕೇಳಿಬಂದಿದೆ, ಎರಡೂ ಪಟ್ಟಣಗಳಲ್ಲಿ ವಿದ್ಯುತ್ ಕಡಿತಗೊಂಡಿವೆ.
ಇನ್ನು ಸ್ಥಳೀಯರು ಸೆರೆ ಹಿಡಿದ ವೀಡಿಯೊಗಳಲ್ಲಿ ಅಲ್ಲಿನ ಆಕಾಶದಾದ್ಯಂತ ಬೆಳಕಿನ ಜ್ವಾಲೆಗಳು ಕಂಡು ಬಂದಿವೆ. “ಜಮ್ಮುವಿನಲ್ಲಿ ಸಂಪೂರ್ಣ ಬ್ಲ್ಯಾಕ್ ಔಟ್ ಜಾರಿ ಮಾಡಲಾಗಿದ್ದು, ಬಾಂಬಿಂಗ್ , ಶೆಲ್ಲಿಂಗ್ ಹಾಗು ಕ್ಷಿಪಣಿ ದಾಳಿಯಂತಹ ಬಹಳ ದೊಡ್ಡ ಶಬ್ದಗಳು ಕೇಳಿ ಬಂದಿವೆ. ಮಾತಾ ವೈಶ್ನೋದೇವಿ ನಮ್ಮೊಂದಿಗಿದ್ದಾಳೆ ಜೊತೆಗೆ ದೇಶದ ಧೀರ ಯೋಧರೂ ಇದ್ದಾರೆ ” ಎಂದು ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ ಶೇಷ್ ಪಾಲ್ ವೈದ್ ಟ್ವೀಟ್ ಮಾಡಿದ್ದಾರೆ. ಕುಪ್ವಾರಾ ಪಟ್ಟಣ ಮತ್ತು ಪಠಾಣ್ ಕೋಟ್ ನಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಪಂಜಾಬ್ ನ ಪಟ್ಟಣ ಗುರುದಾಸ್ಪುರದಲ್ಲಿ ಬ್ಲ್ಯಾಕೌಟ್ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಅಖ್ನೂರ್ನ ಸ್ಥಳೀಯ ನಿವಾಸಿಯೊಬ್ಬರು, ‘ಆಕಾಶದಲ್ಲಿ ಕೆಂಪು ಬಣ್ಣದ ಬಲೂನ್ಗಳಂತೆ ಕಾಣುವ ವಸ್ತುಗಳು ಹಾರಾಡುತ್ತಿದ್ದವು. ಕೆಲವೇ ಕ್ಷಣಗಳಲ್ಲಿ ಜೋರಾದ ಸ್ಫೋಟದ ಶಬ್ದ ಕೇಳಿತು. ಇಡೀ ಪ್ರದೇಶ ಕತ್ತಲೆಯಲ್ಲಿ ಏನೂ ಕಾಣದಂತಾಯಿತು. ವಾಹನಗಳ ದೀಪಗಳು ಮಾತ್ರ ಗೋಚರಿಸುತ್ತಿವೆ ಎಂದು ತಿಳಿಸಿದ್ದಾರೆ. ಪ್ರದೇಶದಲ್ಲಿ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸೈರನ್ಗಳ ಶಬ್ದಗಳು ಕೇಳಿಬರುತ್ತಿವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ವರದಿಗಳ ಪ್ರಕಾರ, ಪಾಕಿಸ್ತಾನವು ಜಮ್ಮುವಿನ ಗಡಿಭಾಗಕ್ಕೆ ಹಲವಾರು ಡ್ರೋನ್ಗಳನ್ನು ಕಳುಹಿಸಿತ್ತು. ಭಾರತೀಯ ಸೇನೆಯ ವಾಯು ರಕ್ಷಣಾ ವ್ಯವಸ್ಥೆಯು ಈ ಡ್ರೋನ್ಗಳನ್ನು ಗುರುತಿಸಿ, ನಿಖರವಾದ ದಾಳಿಯ ಮೂಲಕ ಹೊಡೆದುರುಳಿಸಿದೆ ಎಂದು ತಿಳಿದು ಬಂದಿದೆ.
Comments are closed.