Chitra Kundapura: ವಿಡಿಯೋ ಮೂಲಕ ಮದುವೆಯಾಗುವ ಹುಡುಗನನ್ನು ಪರಿಚಯಿಸಿದ ಚೈತ್ರ ಕುಂದಾಪುರ!!

Share the Article

 

Chaitra Kinda pure : ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಹಿಂದೂ ಫೈರ್ ಬ್ರಾಂಡ್ ಆಗಿರುವ ಚೈತ್ರ ಕುಂದಾಪುರ ಅವರ ಮದುವೆ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಮೇ 9ರಂದು ಚೈತ್ರ ಅವರ ವಿವಾಹ ಮಹೋತ್ಸವ ನಡೆಯಲಿದೆ. ಇದುವರೆಗೂ ಚೈತ್ರ ಕುಂದಾಪುರ ಅವರನ್ನು ವರಿಸುವ ಹುಡುಗ ಯಾರೆಂಬುದು ಹಲವರ ಕುತೂಹಲವಾಗಿತ್ತು. ಆದರೆ ಈಗ ಚೈತ್ರ ಕುಂದಾಪುರ ಅವರು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಾನು ಮದುವೆಯಾಗುವ ಹುಡುಗನನ್ನು ಪರಿಚಯಿಸಿದ್ದಾರೆ.

 

ಹೌದು, ಚೈತ್ರಾ ಕುಂದಾಪುರ (Chaithra Kundapura) ಅವರು ಹಸೆಮಣೆ ಏರಲಿ ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆಗೆ (Chaithra Kundapura Marriage) ತಯಾರಿ ನಡೆದಿದೆ. ಇಷ್ಟು ದಿನಗಳ ಕಾಲ ಚೈತ್ರಾ ಕುಂದಾಪುರ ಅವರು ವರನ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ಹೊಸದೊಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.

 

ಅಂದಹಾಗೆ ಶ್ರೀಕಾಂತ್ ಕಶ್ಯಪ್ (Shrikanth Kashyap) ಜೊತೆ ಚೈತ್ರಾ ಕುಂದಾಪುರ ಮದುವೆ ನೆರವೇರಲಿದೆ. ಪ್ರೀ-ವೆಡ್ಡಿಂಗ್ ವಿಡಿಯೋವನ್ನು ಚೈತ್ರಾ ಕುಂದಾಪುರ ಅವರ ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್ ಮಾಡಿದ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

 

ಇನ್ನು ಕಾಲೇಜಿನಲ್ಲಿ ಓದುತ್ತಿದ್ದಾಗ ಶ್ರೀಕಾಂತ್ ಕಶ್ಯಪ್ ಪರಿಚಯವಾಗಿತ್ತು. ಜಗಳದಿಂದ ಶುರುವಾದ ಸ್ನೇಹ ಈಗ ಹಸೆಮಣೆ ಏರಲು ಮುನ್ನುಡಿ ಬರೆದಿದೆ. ಆ್ಯನಿಮೇಷನ್ ಕೋರ್ಸ್ ಮಾಡಿದ್ದ ಶ್ರೀಕಾಂತ್ ಕಶ್ಯಪ್ ಸುದ್ದಿವಾಹಿನಿವೊಂದರಲ್ಲಿ ಚೈತ್ರಾ ಜೊತೆ ಕೆಲಸ ಮಾಡಿದ್ದರು. ಇದೀಗ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯದ ಕೆಲಸದಲ್ಲಿ ಶ್ರೀಕಾಂತ್ ತೊಡಗಿಸಿಕೊಂಡಿದ್ದಾರೆ. ಸತತ 12 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದೆ.

 

 ಈ ಕುರಿತಾಗಿ ಪೋಸ್ಟ್ ಹಾಕಿರುವ ಅವರು ‘ಇದು ಬಹಿರಂಗಪಡಿಸುವ ಸಮಯ. ಬದುಕಿನ ಸಂಕಷ್ಟದಿಂದ ಸಂಭ್ರಮದವರೆಗೂ ಜೊತೆ ನಿಂತ ಜೀವದೊಂದಿಗೆ ಸಪ್ತಪದಿ ಇಡುವ ಸಮಯ ಬಂದಿದೆ. ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಕಾಯಲಿ’ ಎಂಬ ಕ್ಯಾಪ್ಷನ್​​ನೊಂದಿಗೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಸಂದರ್ಭದಲ್ಲಿ ಮದುವೆ ಬಗ್ಗೆ ಸುದೀಪ್ ಮಾತನಾಡಿದ್ದ ತುಣುಕು ಕೂಡ ಈ ವಿಡಿಯೋದಲ್ಲಿದೆ.

https://www.instagram.com/reel/DJZdwUjh45H/?igsh=MWg1bmoyYzduOWVvYg==

 

ಅಲ್ಲದೆ ನಮ್ಮದು 12 ವರ್ಷಗಳ ಪ್ರೀತಿ. ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಪ್ರೀತಿಸಿದ ಹುಡುಗನೊಂದಿಗೆ ಮೇ 9ರಂದು ಕುಂದಾಪುರದಲ್ಲಿ ಮದುವೆ ಆಗುತ್ತಿದ್ದೇನೆ. ಈಗಾಗಲೇ ಮೆಹಂದಿ ಸೇರಿದಂತೆ ಮದುವೆ ಶಾಸ್ತ್ರಗಳು ಆರಂಭ ಆಗಿದೆ. ಕುಟುಂಬಕ್ಕೆ ಆಪ್ತರಾದ 100 ಜನರಿಗೆ ಮಾತ್ರ ಮದುವೆಗೆ ಆಹ್ವಾನಿಸಿದ್ದೇವೆ. ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗುತ್ತಿದೆ. ವೈದಿಕ ಶಾಸ್ತ್ರದಂತೆ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.

Comments are closed.