ATM: ದೇಶಾದ್ಯಂತ 3 ದಿನ ATM ಬಂದ್?!

ATM: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭೀತಿ ಎದುರಾದಾಗಿಂದಲೂ ಹಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಅದರೊಂದಿಗೆ ದೇಶಾದ್ಯಂತ ಎಟಿಎಂ ಬಂದ್ ಆಗುತ್ತದೆ ಎಂಬ ವಿಚಾರವೂ ಕೂಡ ಒಂದು.
ಹೌದು, ಯುದ್ಧದ ಕಾರಣ ರಾಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದ ಬ್ಯಾಂಕುಗಳು, ಎಟಿಎಂಗಳು 2-3 ದಿನಗಳ ಕಾಲ ಬಂದ್ ಆಗಿರುತ್ತವೆ ಎನ್ನುವಂತಹ ಸುದ್ದಿ ಕೇಳಿಬರುತ್ತಿದೆ. ಇದರಿಂದ ಜನರು ಗೊಂದಲಕ್ಕೆ ಈಡಾಗಿದ್ದಾರೆ. ಅದ್ರೆ ಈಗ ಇದೇ ವೇಳೆ ಸರ್ಕಾರವು ಈ ಸುದ್ದಿಯನ್ನು ಅಲ್ಲಗಳೆದಿದ್ದು, ಎಟಿಎಂ ಬಂದ್ ಆಗುವುದಿಲ್ಲ ಎಂದಿದೆ.
ಇನ್ನು ‘ಎಟಿಎಂಗಳು 2-3 ದಿನ ಮುಚ್ಚಿರುತ್ತವೆ ಎಂಬುದು ಸುಳ್ಳು ಸುದ್ದಿ. ಮಾಮೂಲಿಯಂತೆ ಇವು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ವೆರಿಫೈ ಆಗದ ಮೆಸೇಜ್ಗಳನ್ನು ಶೇರ್ ಮಾಡಬೇಡಿ’ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದೆ.
Comments are closed.