Operation Sindhoor: ಪಾಕ್‌ ವಿರುದ್ಧ ಪ್ರತೀಕಾರ ದಾಳಿ – “ಆಪರೇಷನ್‌ ಸಿಂಧೂರ್‌” ಎಂಬ ಹೆಸರು ಇಟ್ಟಿದ್ದೇಕೆ?

Share the Article

Operation Sindhoor: : ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರು ಮನಬಂದಂತೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಈ ದಾಳಿಗೆ ರಾಜ್ಯದ ಮೂವರು ಸೇರಿ ಒಟ್ಟು 28 ಮಂದಿ ಬಲಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ ನಡೆಸಿ ಸುಮಾರು ಇನ್ನೂರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಹಾಗಿದ್ದರೆ ಈ ಆಪರೇಷನ್ ಗೆ ಸಿಂಧೂರ್ ಎಂದು ಹೆಸರಿಡಲು ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್.

ಪುಲ್ವಮ ಘಟನೆಯಲ್ಲಿ ಯಾವೊಬ್ಬ ಹೆಣ್ಣುಮಗಳನ್ನೂ ಕೊಲ್ಲದ ಉಗ್ರಗಾಮಿಗಳು ಕುಟುಂಬದ ಗಂಡಸರನ್ನೇ ಟಾರ್ಗೆಟ್‌ ಮಾಡಿದ್ದರು. ಉಗ್ರರ ರಾಕ್ಷಸೀ ಕೃತ್ಯಕ್ಕೆ ನವದಂಪತಿಗಳ ಕನಸು ನುಚ್ಚು ನೂರಾಗಿದ್ದರೆ, ಹತ್ತಾರು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಪುಟಾಣಿ ಮಕ್ಕಳು ತಂದೆಯಿಲ್ಲದೇ ಜೀವನ ಎದುರಿಸುವ ಅನಿವಾರ್ಯತೆ ಬಂದಿದೆ.

ಭಯೋತ್ಪಾದಕರ ದಾಳಿಯಲ್ಲಿ ಮನೆಯೊಡೆಯನನ್ನು ಕಳೆದುಕೊಂಡ ಹೆಣ್ಣುಮಕ್ಕಳ ಹಣೆಯಲ್ಲಿನ ಸಿಂಧೂರವೂ ಅಳಿಸಿಹೋಗಿದೆ. ಹೆಣ್ಣು ಮಕ್ಕಳ ಕುಂಕುಮ ಭಾಗ್ಯ ಕಸಿದ ಉಗ್ರರ ಹೇಯ ಕೃತ್ಯದ ವಿರುದ್ಧ ಸಿಡಿದೆದ್ದ ಭಾರತ ಇದೇ ಕಾರಣಕ್ಕೆ ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ನಡೆಸಿದ ಪತ್ರಿದಾಳಿಗೆ “ಆಪರೇಷನ್‌ ಸಿಂಧೂರ್‌” ಎಂದು ಹೆಸರಿಡಲಾಗಿದೆಯಂತೆ!

Comments are closed.