Operation Sindoor: ಅಪರೇಷನ್ ಸಿಂಧೂರ್ ಹೆಸರು ಸೂಚಿಸಿದ್ಯಾರು?

Operation Sindoor: ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಅಪರೇಷನ್ ಸಿಂಧೂರ್ ಹೆಸರನ್ನು ದೇಶದ ಪ್ರಧಾನಿ ಮೋದಿಯವರೇ ಈ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ಈ ಕುರಿತು ವರದಿ ಮಾಡಿದೆ.
#WATCH | Government of India presentation on the terrorist attacks in India, at media briefing on #OperationSindoor pic.twitter.com/uE03V2r9hE
— ANI (@ANI) May 7, 2025
ಸಿಂಧೂರ್ ಎಂಬ ಹೆಸರು ಹಲವು ಅರ್ಥಗಳಿಂದ ಕೂಡಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹೆಣ್ಣು ಮಕ್ಕಳ ಸಿಂಧೂರವನ್ನು ಗಮನಿಸಿ ಅವರ ಧರ್ಮವನ್ನು ಕೇಳಿ ಅವರ ಗಂಡನನ್ನು ಕೊಲ್ಲಲಾಯಿತು. ತಮ್ಮ ಸೌಭಾಗ್ಯದ ಮತ್ತು ಮುತ್ತೈದೆಯರ ಸಂಕೇತವಾದ ಸಿಂಧೂರವನ್ನು ಹಾಕುವ ಹಕ್ಕನ್ನು ಕಳೆದುಕೊಂಡರು. ಹೀಗಾಗಿ ಈ ಕಾರ್ಯಾಚರಣೆಗೆ ಅಪರೇಷನ್ ಸಿಂಧೂರ್ ಎಂದು ಹೆಸರಿಡುವುದು ಸೂಕ್ತ ಎಂದು ಹೆಸರಿಡಲಾಗಿದೆ.
ಭಾರತೀಯ ಸೇನೆಯು ಬಿಡುಗಡೆ ಮಾಡಿದ ಚಿತ್ರದಲ್ಲಿ ಅಪರೇಷನ್ ಸಿಂಧೂರ್ ಅನ್ನು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಸಿಂಧೂರ್‌ನಲ್ಲಿರುವ ಒಂದು ಸೊನ್ನೆಯನ್ನು ಸಿಂಧೂರ್‌ದ ಬಟ್ಟಲಿನಂತೆ ಕೆಂಪು ಬಣ್ಣದಲ್ಲಿ ಚಿತ್ರಿಸಲಾಗಿದೆ.
Comments are closed.