Google: ಗೂಗಲ್‌ನಲ್ಲಿ ಸಿಂಧೂರದ ಅರ್ಥ ಹುಡುಕಿದ ಪಾಕಿಸ್ತಾನಿಯರು!

Google: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯೂ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ನಡೆಸಿ ಉತ್ತರ ನೀಡಿದೆ.

ಮಂಗಳವಾರ ತಡರಾತ್ರಿ 1.30 ರ ಸುಮಾರಿಗೆ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು, ಪಾಕ್ ಜನತೆಯೂ ಈ ದಾಳಿಯಿಂದ ಬೆಚ್ಚಿ ಬಿದ್ದಿದ್ದು ಸದ್ಯಕ್ಕಂತೂ ಪಾಕಿಸ್ತಾನಿಯರು ಗೂಗಲ್ ನಲ್ಲಿ ಸಿಂಧೂರ ಹೆಸರಿನ ಅರ್ಥವೇನು ಎನ್ನುವ ಬಗ್ಗೆ ಹುಡುಕಾಟ ನಡೆಸಿದ್ದಾರೆ.
ಪಾಕಿಸ್ತಾನಿಯರು ಗೂಗಲ್ ನಲ್ಲಿ (Google) ಆಪರೇಷನ್ ಸಿಂಧೂರ್, ಆಪರೇಷನ್ ಸಿಂಧೂರ್ ವಿಕಿ, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ಭಾರತದ ಕ್ಷಿಪಣಿ ದಾಳಿ, ಆಪರೇಷನ್ ಸಿಂಧೂರ್ ಎಂದರೇನು? ,ಬಿಳಿಧ್ವಜ, ಪಾಕಿಸ್ತಾನದ ಮೇಲೆ ಭಾರತದ ದಾಳಿ, ವಾಯುದಾಳಿ, ಭಾರತೀಯ ಸೇನೆ ಈ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ.
ಅದಲ್ಲದೆ, ಈ ಪಾಕ್ ಪ್ರಜೆಗಳು ʻಸಿಂಧೂರ ಎಂದರೇನು ಎನ್ನುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು ಹುಡುಕಾಟ ನಡೆಸಿರುವುದು ಗೂಗಲ್ ಟ್ರೆಂಡ್ ನಲ್ಲಿ ತಿಳಿದು ಬಂದಿದೆ.
Comments are closed.