Telangana: ವೈದ್ಯರಿಲ್ಲದೇ, ಫೋನ್‌ ನೋಡಿ ಗರ್ಭಿಣಿ ಮಹಿಳೆಯ ಸಿಸೇರಿಯನ್‌ ಮಾಡಿದ ನರ್ಸ್‌- ಅವಳಿ ಶಿಶುಗಳು ಸಾವು!

Share the Article

Telangana: ಮೊಬೈಲ್‌ನಲ್ಲಿ ವೈದ್ಯರ ಸೂಚನೆಯನ್ನು ಅನುಸರಿಸುತ್ತಾ ನರ್ಸ್‌ ಒಬ್ಬಾಕೆ ಗರ್ಭಿಣಿಗೆ ಸಿಸೇರಿಯನ್‌ ಮಾಡಿದ್ದು, ಪರಿಣಾಮ ಶಸ್ತ್ರಚಿಕಿತ್ಸೆ ನಡೆದ ಕೆಲವೇ ನಿಮಿಷಗಳಲ್ಲಿ ಅವಳಿ ಶಿಶುಗಳು ಸಾವಿಗೀಡಾಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣ್ಣಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಗರ್ಭಿಣಿ ಐವಿಎಫ್‌ ಮಾಡಿದ್ದು, ಈ ಹೆರಿಗೆ ಸಾಧಾರಣವಾಗಿರಲಿಲ್ಲ. ತುಂಬಾ ಸೂಕ್ಷ್ಮತೆಯಿಂದ ಕೂಡಿತ್ತು. 18ವಾರಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಶಿಶುಗಳನ್ನು ಹೊರತೆಗೆದಿದ್ದರು. ತಾಯಿಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಆದರೆ ಮಕ್ಕಳು ಶಸ್ತ್ರಚಿಕಿತ್ಸೆ ಮುಗಿದ ಕೆಲವೇ ಗಂಟೆಗಳಲ್ಲಿ ಸಾವಿಗೀಡಾಗಿದೆ.

ಈ ಘಟನೆಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಸೇರಿದಂತೆ, ಖಾಸಗಿ ಆಸ್ಪತ್ರೆಯನ್ನು ತಕ್ಷಣವೇ ಪರಿಶೀಲನೆ ಮಾಡಿದ್ದು, ಯಾವುದೇ ಶಸ್ತ್ರಚಿಕಿತ್ಸೆ ನಡೆಸಲು, ಹಿರಿಯ ವೈದ್ಯರು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ದೈಹಿಕವಾಗಿ ಹಾಜರಿರಬೇಕು, ಪ್ರಸೂತಿ ತಜ್ಞರಿಂದ ದೂರವಾಣಿ ಮೂಲಕ ಸೂಚನೆಗಳನ್ನು ಪಡೆಯುತ್ತಾ ನರ್ಸ್​ ಆಪರೇಷನ್ ನಡೆಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ ತನಿಖೆ ನಡೆಸುತ್ತಿದ್ದೇವೆ, ಸಧ್ಯಕ್ಕೆ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.