Education: ಎಲ್ ಕೆ ಜಿ ದಾಖಲಾತಿಗೆ 4 ವರ್ಷ ಮತ್ತು ಯುಕೆಜಿ ದಾಖಲಾತಿಗೆ 5 ವರ್ಷ ತುಂಬುವುದು ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ!

Education: 2026-27ನೇ ಶೈಕ್ಷಣಿಕ ಸಾಲಿನಿಂದ ಜೂನ್ 1ಕ್ಕೆ ಆರು ವರ್ಷ ತುಂಬಿರುವ ಮಕ್ಕಳನ್ನು ಮಾತ್ರ 1ನೇ ತರಗತಿಗೆ ಸೇರಿಸಿಕೊಳ್ಳಲು ಅವಕಾಶವಿದ್ದು ಹೀಗಾಗಿ 2025-26ನೇ ಶೈಕ್ಷಣಿಕ ವರ್ಷದಿಂದ LKG ದಾಖಲಾತಿಗೆ ನಾಲ್ಕು ವರ್ಷ ಮತ್ತು UKG ದಾಖಲಾತಿಗೆ ಐದು ವರ್ಷ ತುಂಬುವುದು ಕಡ್ಡಾಯವಾಗಿದೆ ಎಂದು ಪ್ರಾಥಮಿಕ ಶಿಕ್ಷಣ (Education) ನಿರ್ದೇಶಕರು ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಕೆಲವು ಪೂರ್ವ ಪ್ರಾಥಮಿಕ ಶಾಲೆಗಳು ಮತ್ತು ಪೋಷಕರು ಜೂನ್ 1ಕ್ಕೆ ನಾಲ್ಕು ವರ್ಷ ತುಂಬಿರದಿದ್ದರೂ ಮಕ್ಕಳನ್ನು ಎಲ್‌ಕೆಜಿಗೆ ದಾಖಲಿಸಿಕೊಳ್ಳುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ಮಕ್ಕಳ ದಾಖಲಾತಿಗೆ ವಯೋಮಿತಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
Comments are closed.