Harish Poonja: ರಿವರ್ಸ್ ಲವ್ ಜಿಹಾದ್ ಗೆ ಒಳಗಾಗಿ ಬುರ್ಖಾ ಹಾಕಿದ ಗುಂಡೂರಾವ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವುದು ದುರಂತ: ಶಾಸಕ ಪೂಂಜ

Harish Poonja: ಬೆಳ್ತಂಗಡಿ: ಸಾಮಾನ್ಯವಾಗಿ ಮುಸ್ಲಿಮರು ಹಿಂದೂ ಯುವತಿಯರನ್ನು ಮೋಸದಿಂದ ಪ್ರೀತಿಯ ನಾಟಕವಾಡುವುದು, ಮದುವೆಯಾಗುವುದು ಇವೆಲ್ಲ ವನ್ನು ಲವ್ ಜಿಹಾದ್ ಎನ್ನುತ್ತೇವೆ. ಆದರೆ ಬುರ್ಖಾ ಹಾಕಿಕೊಂಡವರಿಂದಲೇ ದಿನೇಶ್ ಗುಂಡೂರಾವ್ ರಿವರ್ಸ್ ಲೌವ್ ಜಿಹಾದ್ ಗೆ ಒಳಗಾಗಿ ಬುರ್ಖಾ ಧಾರಿ ಉಸ್ತುವಾರಿ ಸಚಿವರಾಗಿ ರುವುದರಿಂದ ಅವರು ನಮ್ಮ ಹಿಂದುಗಳಿಗೆ ನ್ಯಾಯಕೊಡಲು ಸಾಧ್ಯವಿಲ್ಲ. ಇಂಥವರು ಬುದ್ದಿವಂತರ ಜಿಲ್ಲೆ ಎಂದೆನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವುದು ದುರಂತ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆರೋಪಿಸಿದ್ದಾರೆ.
ದಿನೇಶ್ ಗುಂಡೂರಾವ್ ಇತ್ತೀಚೆಗೆ ಹರೀಶ್ ಪೂಂಜಾರನ್ನು ಉದ್ದೇಶಿಸಿ ಹರೀಶ್ ಪೂಂಜ ಒಬ್ಬ ಸೀರಿಯಲ್ ಅಫೆ೦ಡರ್ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನನ್ನನ್ನು ಸೀರಿಯಲ್ ಅಪೆಂಡರ್ ಎಂದು ಹೇಳುವ ದಿನೇಶ್ ಗುಂಡೂರಾವ್ ರಿವರ್ಸ್ ಲವ್ ಜಿಹಾದ್ ಆದವರು. ಏಕೆಂದರೆ ಅವರ ಪತ್ನಿ ಮುಸ್ಲಿಂ. ಅವರ ಪತ್ನಿ ಗುಂಡೂರಾವ್ ರನ್ನು ಲವ್ ಜಿಹಾದ್ ನಡೆಸಿ ಮದುವೆಯಾಗಿರುವುದರಿಂದ ಗುಂಡೂರಾವ್ ಅವರದ್ದು ಉಲ್ಟಾ ಅಂದರೆ, ರಿವರ್ಸ್ ಲೌವ್ ಜಿಹಾದ್ ಆಗಿದೆ.
ಹೀಗಾಗಿ ಗುಂಡುರಾವ್ ಬುರ್ಖಾಧಾರೀ ಉಸ್ತುವಾರಿ ಸಚಿವರಾಗಿದ್ದಾರೆ. ಹೀಗಾಗಿಯೇ ಅವರು ನಮ್ಮ ಜಿಲ್ಲೆಯವರನ್ನು ಥರ್ಡ್ ಸಿಟಿಜನ್ ಭಾವನೆಯಿಂದ ಕೀಳಾಗಿ ಕಾಣುತ್ತಿದ್ದಾರೆ. ಇಂತಹವರು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವುದು ದುರಂತ. ಈ ಬುರ್ಖಾ ದಾರಿ ಉಸ್ತುವಾರಿ ಸಚಿವರು ನಮ್ಮ ಹಿಂದುಗಳಿಗೆ ಎಷ್ಟು? ಹೇಗೆ? ನ್ಯಾಯಕೊಡಲು ಸಾಧ್ಯ? ಎಂದು ಹರೀಶ್ ಪೂಂಜ ಆರೋಪಿಸಿದ್ದಾರೆ.
Comments are closed.