Bantwala: ಮೃತ ಸುಹಾಸ್‌ ಶೆಟ್ಟಿ ಮೆನಗೆ ನಳಿನ್‌ ಕುಮಾರ್‌ ಕಟೀಲ್‌ ಭೇಟಿ!

Share the Article

Bantwala: ಬಜ್ಪೆಯಲ್ಲಿ ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಮನೆಗೆ ಮಾಜಿ ರಾಜ್ಯಾಧ್ಯಕ್ಷ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಭೇಟಿ ನೀಡಿ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ಆರ್ಥಿಕ ಸಹಾಯ ನೀಡಿದರು.

ಸುಹಾಸ್‌ ಶೆಟ್ಟಿ ತಂದೆ ಹಾಗೂ ತಾಯಿ ಜೊತೆ ಕೆಲ ಹೊತ್ತು ಮಾತನಾಡಿ, ಕುಟುಂಬಕ್ಕೆ ಸಾಂತ್ವನ ನೀಡಿ, ಕುಟುಂಬಕ್ಕೆ ಧೈರ್ಯ ನೀಡಿದರು.

ರಾಜ್ಯ ಸರಕಾರದ ಮತ್ತು ಪೊಲೀಸ್‌ ಇಲಾಖೆ ಮೇಲೆ ನಮಗೆ ಭರವಸೆ ಇಲ್ಲ. ಸರಕಾರದ ಪರವಾಗಿ ಇಲ್ಲಿಯವರೆಗೆ ಯಾವೊಬ್ಬ ವ್ಯಕ್ತಿಯೂ ಮಾತನಾಡಿಲ್ಲ ಎಂದು ಮನೆಯವರು ಬೇಸರ ವ್ಯಕ್ತಪಡಿಸಿದರು. ಪ್ರಕರಣದ ತನಿಖೆಯನ್ನು ಕೇಂದ್ರದ ಎನ್‌ಐಎ ತನಿಖಾ ಸಂಸ್ಥೆಗೆ ವಹಿಸಿ, ಸುಹಾಸ್‌ ಶೆಟ್ಟಿಯ ಸಾವಿಗೆ ನ್ಯಾಯ ಒದಗಿಸಿ ಕೊಡಿ, ಮತ್ತೊಮ್ಮೆ ಹಿಂದೂ ಕಾರ್ಯಕರ್ತನಿಗೆ ಇಂತಹ ಕಷ್ಟ ಬರಬಾರದು ಎಂದು ಕಣ್ಣೀರಿಟ್ಟು ಹೇಳಿದರು.

Comments are closed.