KPSC : KPSC ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ದೋಷ: ಹಲವರಿಗೆ ಪ್ರವೇಶ ಪತ್ರವೇ ಸಿಗದಂತ ಅವ್ಯವಸ್ಥೆ!

KPSC: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗೂ ಬಿ ವೃಂದದ 384 ಹುದ್ದೆಗಳ ನೇಮಕಾತಿಗೆ ಶನಿವಾರ ಪರೀಕ್ಷೆ ಆರಂಭವಾಗಿದ್ದು, ಆ ಮುಖ್ಯ ಪರೀಕ್ಷೆಯಲ್ಲೂ ಎಡವಟ್ಟುಗಳು ಮರುಕಳಿಸಿವೆ.
ಹಲವು ಅಭ್ಯರ್ಥಿಗಳು ಪ್ರವೇಶ ಪತ್ರ ಸಿಗದೆ ಪರೀಕ್ಷೆಯಿಂದ ವಂಚಿತರಾಗಿ ಆಕ್ರೋಶಗೊಂಡಿದ್ದರೆ, ಕನ್ನಡ ವ್ಯಾಕರಣ, ವಾಕ್ಯರಚನೆ ತಪ್ಪು ತಪ್ಪಾಗಿ ಬಳಸಿದ್ದು ಆಕ್ರೋಶಕ್ಕೆ ಗುರಿಯಾಗಿದೆ.
ಇನ್ನು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಹೈಕೋರ್ಟ್ ಶುಕ್ರವಾರ ಸಂಜೆ 5.30ಕ್ಕೆ ಅನುಮತಿ ನೀಡಿತ್ತು. ರಾತ್ರಿ 8.30ಕ್ಕೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿ, ಪ್ರವೇಶ ಪತ್ರ ಪಡೆಯಲು ಅಭ್ಯರ್ಥಿಗಳ ಹೆಸರು ಪ್ರಕಟಿಸಿತ್ತು. ಶುಕ್ರವಾರ ಮಧ್ಯರಾತ್ರಿ 2 ಗಂಟೆವರೆಗೂ ಪ್ರವೇಶ ಪತ್ರ ವಿತರಿಸಿದ್ದಾರೆ. ಹಲವರು ಪ್ರವೇಶ ಪತ್ರ ಸಿಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.
Comments are closed.