ನಾಲ್ಕನೇ ಬಾರಿಗೆ ಮದ್ಯದ ದರ ಏಕ್ ದಂ ಹೆಚ್ಚಳ !ಮಧ್ಯದ ಅಂಗಡಿಗಳೇ ಸರ್ಕಾರದ ಎಟಿಎಂ!!

Bengaluru: ಕರ್ನಾಟಕದ ಹೆಮ್ಮೆಯ ಗ್ಯಾರಂಟಿ ಸರ್ಕಾರ ಇತ್ತೀಚಿಗೆ ಡಿಸೇಲ್, ವಿದ್ಯುತ್, ಹಾಲು ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿದ್ದು ಸಾಲದೆಂಬಂತೆ ಇದೀಗ ಮತ್ತೊಮ್ಮೆ ನಾಲ್ಕನೇ ಬಾರಿಗೆ ಮದ್ಯದ ದರವನ್ನು ಶೇ 10 ರಿಂದ 15ರಷ್ಟು ಹೆಚ್ಚಿಸಲು ಮುಂದಾಗಿದೆ.
ಹೀಗಾಗಿ ಮೊದಲು ಹಿಂದೆ ಮುಂದೆ ಯೋಚಿಸದೆ ಅಬ್ಬರದಿಂದ ಗ್ಯಾರಂಟಿ ಯೋಜನೆ ಮಾಡಲು ಹೊರಟ ಕೈ ಸರಕಾರಕ್ಕೆ ಈಗ ಮದ್ಯದಂಗಡಿಗಳೇ ಎಟಿಎಂ ಗಳಂತಾಗಿ ಪರಿಣಮಿಸಿರುವುದು ಸರ್ಕಾರದ ದೌರ್ಭಾಗ್ಯವೋ ಜನತೆಯ ಸೌಭಾಗ್ಯವೋ? ಎಂಬ ಪ್ರಶ್ನೆಗಳು ಇದೀಗ ಜನಸಾಮಾನ್ಯರನ್ನು ಕಾಡತೊಡಗಿದೆ.
ಕಳೆದ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮದ್ಯದ ದರವನ್ನು ನಾಲ್ಕನೇ ಬಾರಿಗೆ ಹೆಚ್ಚಿಸುವ ಬಗ್ಗೆ ಘೋಷಣೆ ಮಾಡಿದ್ದರಾದರೂ ಈವರೆಗೆ ಮದ್ಯ ದರವನ್ನು ಹೆಚ್ಚಿಸಿರಲಿಲ್ಲ. ಅದೇ ರೀತಿ ಸರ್ಕಾರ ಇನ್ನು ಮುಂದೆ ಮದ್ಯದ ಬಾಟಲಿಗಳಿಗೆ ಕೈ ಹಾಕಲ್ಲವೆಂದು ಮದ್ಯಪ್ರಿಯರೂ ಭಾವಿಸಿಕೊಂಡಿದ್ದರು. ಆದರೆ ಇದೀಗ ಕಳೆದ ಮಂಗಳವಾರ ಅಬಕಾರಿ ಇಲಾಖೆ ನಾಲ್ಕನೇ ಬಾರಿಗೆ ಮದ್ಯದ ದರ ಹೆಚ್ಚಳದ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅದರಲ್ಲೂ ಗಮನಾರ್ಹ ಸಂಗತಿ ಏನೆಂದರೆ ಮಧ್ಯಮ ವರ್ಗಗಳೇ ಹೆಚ್ಚಾಗಿ ಉಪಯೋಗಿಸುವ ಮದ್ಯಗಳಿಗೆ ಮಾತ್ರ ದರ ಹೆಚ್ಚಳ ಮಾಡಿ ಶ್ರೀಮಂತ ವರ್ಗಗಳು ಉಪಯೋಗಿಸುವ ಹೈ ಬ್ರಾಂಡೆಡ್ ಮದ್ಯಗಳಿಗೆ ಮಾತ್ರ ದರ ಹೆಚ್ಚಳ ಮಾಡದಿರುವುದು ಈ ಬಾರಿಯ ದರ ಹೆಚ್ಚಳದ ಸ್ಪೆಶಾಲಿಟಿಯಾಗಿದೆ. ಇದರಿಂದಾಗಿ ಇದೀಗ ಕೈ ಸರಕಾರ ಮಧ್ಯಮ ವರ್ಗಗಳ ಕೆಂಗಣ್ಣಿಗೆ ಗುರಿಯಾಗಿದೆ. ಗ್ಯಾರಂಟಿಯನ್ನು ಬ್ಯಾಲೆನ್ಸ್ ಮತ್ತು ಮ್ಯಾನೇಜ್ ಮಾಡಲು ಹರಸಾಹಸ ಪಡುತ್ತಿರುವ ಕೈ ಸರಕಾರ ಈ ಬಾರಿ ಮಧ್ಯಮ ವರ್ಗದವರ ಮದ್ಯದ ಬಾಟಲಿಗಳ *ಮಧ್ಯೆಯೇ* ಕೈಹಾಕಿ ಅಮಲಿನ ಮೊರೆ ಹೋಗಿ ಮದ್ಯ ದಿಂದ ಈ ಬಾರಿ 40,000 ಕೋಟಿ ರೂಪಾಯಿ ಕಮಾಯಿ ಗಳಿಸುವ ಬಹುದೊಡ್ಡ ಗುರಿಯನ್ನು ಹೊಂದಿದೆ ಎಂದು ಕಳೆದ ಮಂಗಳವಾರ ಅಬಕಾರಿ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. ಅದರಲ್ಲೂ ಮುಖ್ಯವಾಗಿ ಮಧ್ಯಮ ವರ್ಗದ ಮದ್ಯಪ್ರಿಯರೇ ಹೆಚ್ಚಾಗಿ ಉಪಯೋಗಿಸುವ ಬ್ರಾಂಡಿ, ವಿಸ್ಕಿ , ರಮ್, ಜಿನ್ ಮುಂತಾದ ಮದ್ಯಗಳ ದರವನ್ನು ಪ್ರತಿ ಕ್ವಾರ್ಟರ್ ಗೆ ಹತ್ತರಿಂದ ಹದಿನೈದು ರೂಪಾಯಿವರೆಗೆ ಹೆಚ್ಚಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದರ ಜೊತೆಗೆ ಮಧ್ಯಮ ವರ್ಗದವರು ಮತ್ತು ಶ್ರೀಮಂತ ವರ್ಗಗಳು ಸೇವಿಸುವ ಎಲ್ಲಾ ಬ್ರಾಂಡ್ ಗಳ ಬಿಯರ್ ಗಳ ದರವನ್ನು ಮಾತ್ರ ಯಾವುದೇ ತಾರತಮ್ಯವಿಲ್ಲದೆ ಹೆಚ್ಚಿಸಲು ಇಲಾಖೆ ಮುಂದಾಗಿದೆ. ಆದರೆ ಶ್ರೀಮಂತರು ಉಪಯೋಗಿಸುವ ಹೈ ಬ್ರಾಂಡೆಡ್, *ಕಿಕ್ ಗ್ರಾಂಟೆಡ್* ಮಾಲುಗಳಿಗೆ ಮಾತ್ರ ಯಾವುದೇ ದರ ಹೆಚ್ಚಳಕ್ಕೆ ಸರ್ಕಾರ ಯಾಕೋ ಮುಂದಾಗದಿರುವುದು ಸರಕಾರಕ್ಕೆ ಶ್ರೀಮಂತರ ಮೇಲಿನ ಭಯದಿಂದಲೋ ಏನೋ ?ಎಂದು ಇದೀಗ ಮಧ್ಯಮ ವರ್ಗದವರು ಪ್ರಶ್ನಿಸುವಂತಾಗಿದೆ. ಇದರ ಜೊತೆಗೆ ವೈನ್ ಸೇರಿದಂತೆ ಇತರ ಕೆಲವು ಲೋ ಕ್ವಾಲಿಟಿ ಮದ್ಯ ಗಳ ದರವನ್ನು ಮಾತ್ರ ಸರ್ಕಾರ ದರ ಹೆಚ್ಚಳದಿಂದ ಹೊರಗಿಟ್ಟಿದೆ.
ಆದರೆ ಈ ದರ ಹೆಚ್ಚಳದ ಕುರಿತು ಏಳು ದಿನಗಳೊಳಗೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದರೂ ಸರಕಾರ ಈ ಮೊದಲೇ ತೀರ್ಮಾನಿಸಿದ ನಿರ್ಧಾರವನ್ನು ಬದಲಿಸುವುದು ಅಸಾಧ್ಯ ಎನ್ನಲಾಗುತ್ತಿದೆ. ಯಾಕೆಂದರೆ ಗ್ಯಾರಂಟಿ ನಿಂತಿರುವುದೇ ಸರ್ಕಾರದ ಮದ್ಯದ ಅಮಲಿನಿಂದ ಎನ್ನುವ ಮಾತುಗಳು ಆರೋಪಗಳು ಹಿಂದಿನಿಂದಲೂ ಕೈ ಸರಕಾರದ ಮೇಲಿರುವುದರಿಂದ ಸರ್ಕಾರ ಮದ್ಯದ ದರ ಹೆಚ್ಚಳದ ಕುರಿತು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲು ಸಾಧ್ಯವೇ ಇಲ್ಲದಂತಹಾ ಪರಿಸ್ಥಿತಿ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕೈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಒಟ್ಟು ಸರಿಸುಮಾರು 45ಕ್ಕೂ ಅಧಿಕ ಅಗತ್ಯ ವಸ್ತುಗಳಿಗೆ ಏಕದಂ ದರವನ್ನು ಹೆಚ್ಚಿಸಿ *ದರ ಹೆಚ್ಚಿಸುವ ದರಿದ್ರ ಸರ್ಕಾರ* ಎಂಬ ಹಿಡಿ ಶಾಪ ಮತ್ತು ಕುಖ್ಯಾತಿಗೂ ಒಳಗಾಗಿರುವುದು ಮಾತ್ರ ಸುಳ್ಳಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ.
Comments are closed.