Jameer Ahammad : ‘ನನಗೆ ಆತ್ಮಾಹುತಿ ಬಾಂಬ್ ಕೊಡಿ, ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗುತ್ತೇನೆ’ – ಸಚಿವ ಜಮೀರ್ ರೋಷಾವೇಶದ ಹೇಳಿಕೆ!!

Share the Article

Jameer Ahammad: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಒಂದಲ್ಲ ಒಂದು ರೀತಿಯ ಶಾಕ್ ನೀಡುತ್ತಲೇ ಬಂದಿದೆ. ಮುಂದೆಯೂ ಅನೇಕ ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಲು ಭಾರತ ಸಜ್ಜಾಗಿತ್ತಿರುವ ಹೊತ್ತಿನಲ್ಲಿ ಕರ್ನಾಟಕದ ಸಚಿವ ಜಮೀರ್ ಅಹಮದ್ ಖಾನ್ ಅವರು ನನಗೆ ಆತ್ಮಾಹುತಿ ಬಾಂಬ್ ಕೊಡಿ, ನಾನು ಅದನ್ನು ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ತಾನು ಕೂಡ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವುದಾಗಿ ಅವರು ಸಾರಿದ್ದಾರೆ.

ಹೌದು, ಕರ್ನಾಟಕ ವಸತಿ ಮತ್ತು ಅಲ್ಪಸಂಖ್ಯಾತರ ಸಚಿವ ಬಿ.ಜೆ.ಜಮೀರ್ ಅಹ್ಮದ್ ಖಾನ್ ಅವರು ಆತ್ಮಾಹುತಿ ಬಾಂಬ್ ಹಿಡಿದು ನೆರೆಯ ದೇಶದ ವಿರುದ್ಧ ಯುದ್ಧ ಮಾಡಲು ಸ್ವಯಂಪ್ರೇರಿತರಾಗಿ ಪಾಕಿಸ್ತಾನಕ್ಕೆ ಹೋಗಲು ಸ್ವಯಂಪ್ರೇರಿತರಾಗಿ ಮುಂದಾಗಿದ್ದಾರೆ. ಅವರು ಹೇಳಿಕೆ ನೀಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ಪಾಕಿಸ್ತಾನ ಯಾವಾಗಲೂ ಭಾರತದ ಶತ್ರುವಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಮತಿಸಿದರೆ ಯುದ್ಧಕ್ಕೆ ಹೋಗಲು ಸಿದ್ಧ. ನಾವು ಭಾರತೀಯರು, ನಾವು ಹಿಂದೂಸ್ತಾನಿಗಳು. ಪಾಕಿಸ್ತಾನವು ನಮ್ಮೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಪಾಕಿಸ್ತಾನ ಯಾವಾಗಲೂ ನಮ್ಮ ಶತ್ರು. ಮೋದಿ, ಅಮಿತ್ ಶಾ ಮತ್ತು ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಿದರೆ, ನಾನು ಯುದ್ಧಕ್ಕಾಗಿ ಪಾಕಿಸ್ತಾನಕ್ಕೆ ಹೋಗಲು ಸಿದ್ಧನಿದ್ದೇನೆ” ಎಂದು ಅವರು ಹೇಳಿದರು.

ಅಲ್ಲದೆ ತಮಗೆ ಆತ್ಮಾಹುತಿ ಬಾಂಬ್ ನೀಡುವಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಕರೆ ನೀಡಿದ್ದರು. “ನಾನು ಯುದ್ಧಕ್ಕಾಗಿ ಪಾಕಿಸ್ತಾನಕ್ಕೆ ಹೋಗುತ್ತೇನೆ. ಮೋದಿ, ಶಾ ನನಗೆ ಆತ್ಮಾಹುತಿ ಬಾಂಬ್ ನೀಡಲಿ, ನಾನು ಅದನ್ನು ನನ್ನ ದೇಹಕ್ಕೆ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗಿ ಅವರ ಮೇಲೆ ದಾಳಿ ಮಾಡುತ್ತೇನೆ” ಎಂದು ಅವರು ಹೇಳಿದರು.

Comments are closed.