Girija Vyas: ದೇವರಿಗೆ ಆರತಿ ಮಾಡುವಾಗ ಬಟ್ಟೆಗೆ ಹೊತ್ತಿಕೊಂಡ ಬೆಂಕಿ – ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ ನಿಧನ

Share the Article

Girija Vyas: ದೇವರಿಗೆ ಆರತಿ ಮಾಡುವಂತಹ ಸಂದರ್ಭದಲ್ಲಿ ಬೆಂಕಿ ಹೊತ್ತುಕೊಂಡು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಗಿರಿಜಾ ವ್ಯಾಸ್ ಗುರುವಾರ (ಮೇ 1) ನಿಧನರಾಗಿದ್ದಾರೆ.

ಗಿರಿಜ ವ್ಯಾಸ್ ಅವರು ಮನೆಯಲ್ಲಿ ದೇವರಿಗೆ ಆರತಿ ಬೆಳಗುವ ವೇಳೆ ಉಡುಪಿಗೆ ಬೆಂಕಿ ತಗುಲಿತ್ತು. ಇದರಿಂದ ಗಿರಿಜಾ ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ತಕ್ಷಣ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನವನ್ನು ಹೊಂದಿದ್ದಾರೆ

ವ್ಯಾಸ್ ‘ಆರತಿ’ ಮಾಡುತ್ತಿದ್ದಾಗ ಕೆಳಗೆ ಉರಿಯುತ್ತಿದ್ದ ದೀಪದಿಂದ ಅವರ ‘ದುಪಟ್ಟಾ’ ಬೆಂಕಿ ಹೊತ್ತಿಕೊಂಡು, ಅವರಿಗೂ ವ್ಯಾಪಿಸಿತ್ತು ಎಂದು ಆಕೆಯ ಸಹೋದರ ಗೋಪಾಲ್ ಶರ್ಮಾ ಹೇಳಿದ್ದಾರೆ. ಕುಟುಂಬ ಸದಸ್ಯರು ಅವಳನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೇ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿರುವುದಾಗಿ ತಿಳಿಸಿದ್ದಾರೆ.

ಅಂದಹಾಗೆ ವ್ಯಾಸ್ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯೂ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Comments are closed.