mangaluru: ಸುಹಾಸ್ ಶೆಟ್ಟಿ ಹತ್ಯೆಗೆ ಬಳಸಿದ್ದ ವಾಹನಗಳು ಯಾರ ಒಡೆತನದವು ಗೊತ್ತಾ?

Mangaluru : ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ನಡೆದ ಮೊಹಮ್ಮದ್ ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿಯನ್ನು ನಾಲ್ವರು ಹೊಂಚು ಹಾಕಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಇದೀಗ ಈ ಕೃತ್ಯ ಎಸಗಲು ಯಾರ ವಾಹನವನ್ನು ಬಳಸಿದ್ದರು ಎಂಬುದು ಬಯಲಾಗಿದೆ.
ಹೌದು,ಗುರುವಾರ ರಾತ್ರಿ ಸುಹಾಸ್ ಶೆಟ್ಟಿ ತಮ್ಮ ಸ್ನೇಹಿತರೊಂದಿಗೆ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಮೀನಿನ ಗೂಡ್ಸ್ ಟೆಂಪೋ ಮತ್ತು ಸ್ವಿಫ್ಟ್ ಕಾರೊಂದು (KA19MK1501) ಅವರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಕಿನ್ನಿಪದವು ಬಳಿ ಮೀನಿನ ಟೆಂಪೋ ಇನ್ನೋವಾ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದು, ಇದರಿಂದ ಕಾರು ರಸ್ತೆ ಬದಿಯ ಸಲೂನ್ ಶಾಪ್‌ಗೆ ನುಗ್ಗಿದೆ. ತಕ್ಷಣವೇ ಸ್ವಿಫ್ಟ್ ಕಾರಿನಿಂದ ಇಳಿದ ದುಷ್ಕರ್ಮಿಗಳು ಲಾಂಗು ಮತ್ತು ತಲ್ವಾರ್‌ಗಳಿಂದ ಸುಹಾಸ್‌ನನ್ನು ಗುರಿಯಾಗಿಸಿ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾರೆ. ಈ ಭೀಕರ ದಾಳಿಯಿಂದ ಸುಹಾಸ್ ಶೆಟ್ಟಿಯ ತಲೆ, ಕೈ, ಕಾಲು, ಮತ್ತು ದೇಹದಾದ್ಯಂತ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಇದೀಗ ಈ ದಾಳಿಗೆ ಬಳಸಿದ ಕಾರಿನ ಮಾಲಕರು ಯಾರೆಂಬುದು ತಿಳಿದು ಬಂದಿದೆ.
ವಶಪಡಿಸಿಕೊಂಡ ಸ್ವಿಫ್ಟ್ ಕಾರು ಅಶ್ರಫ್ ಎಂಬಾತನ ಒಡೆತನದ್ದಾಗಿದ್ದು, ಬೊಲೆರೋ ಗೂಡ್ಸ್ ಟೆಂಪೋ ಇಸ್ಮಾಯಿಲ್ ಅಬ್ದುಲ್ಲಾ ರೆಹಮಾನ್ ಎಂಬಾತನ ಮಾಲೀಕತ್ವದಲ್ಲಿದೆ. ಬಜಪೆ ಪೊಲೀಸರು ಈ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಮಂಗಳೂರು ಮತ್ತು ಉಡುಪಿ ಆರ್‌ಟಿಓ ಕಚೇರಿಗಳಿಗೆ ದೂರವಾಣಿ ಕರೆ ಮಾಡಿ, ವಾಹನ ಮಾಲೀಕರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
Comments are closed.