Woman Elopes: ಗಂಡ ಗಡ್ಡ ಶೇವ್‌ ಮಾಡಿಲ್ಲ ಎಂದು ಮೈದುನನ ಜೊತೆ ಓಡಿ ಹೋದ ಮಹಿಳೆ

Share the Article

Woman Elopes: ಉತ್ತರ ಪ್ರದೇಶದ ಮೀರತ್‌ನಲ್ಲಿ ಗಂಡ ತೆಗೆಯಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆ ಮೈದಯನನೊಂದಿಗೆ ಓಡಿ ಹೋಗಿದ್ದಾಳೆ. ಈ ವಿವಾಹೇತರ ಸಂಬಂಧದ ಹಿಂದಿನ ಕಾರಣ ನಿಜಕ್ಕೂ ಕುತೂಹಲಭರಿತವಾಗಿದೆ.

ಮಹಿಳೆ ಮೀರತ್‌ನಲ್ಲಿ ಮೌಲಾನಾ ಒಬ್ಬರನ್ನು ವಿವಾಹವಾಗಿದ್ದು, ಮದುವೆಯದಲ್ಲಿ ಗಂಡನಿಗಿದ್ದ ಗಡ್ಡ ಆಕೆಗೆ ಇಷ್ಟವಾಗಿರಲಿಲ್ಲ. ತನ್ನ ಮನಸ್ಸಿನಲ್ಲಿರುವುದನ್ನು ಗಂಡನ ಬಳಿ ಹೇಳಿಕೊಂಡು ಗಡ್ಡವನ್ನು ಬೋಳಿಸಲು ಹೇಳಿದ್ದಾಳೆ. ಆದರೆ ಆತ ನಿರಾಕರಿಸಿದ್ದ. ಈ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು.

ಆದರೆ ನಂತರ ಆಕೆ ತನ್ನ ಗಂಡನ ಜೊತೆ ಜಗಳವಾಡುವುದನ್ನು ನಿಲ್ಲಿಸಿದ್ದು, ಗಂಡನ ತಮ್ಮನನ್ನು ಪ್ರೀತಿಸಲು ಪ್ರಾರಂಭಿಸಿದ್ದಳು. ಆಕೆ ಮೈದುನನ ಜೊತೆ ಇದೀಗ ಓಡಿ ಹೋಗಿದ್ದು, ಗಂಡ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾನೆ.

ಏಳು ತಿಂಗಳ ಹಿಂದೆ ಉಜ್ವಲ್‌ ಎಂಬಾತ ಇಂಚೌಲಿಯ ಯುವತಿಯನ್ನು ವಿವಾಹವಾಗಿದ್ದು, ಇದೀಗ ದೂರಿನಲ್ಲಿ ಗಡ್ಡದ ವಿಷಯವನ್ನು ಉಲ್ಲೇಖ ಮಾಡಲಾಗಿದ್ದು, ಹಾಗೂ ಪ್ರೀತಿಯ ವಿಷಯನ್ನು ಕೂಡಾ ಉಲ್ಲೇಖಿಸಲಾಗಿದೆ. ಪೊಲೀಸರ ತನಿಖೆ ವೇಳೆ ಮಹಿಳೆ ಲುಧಿಯಾನದಲ್ಲಿದ್ದಾಳೆಂದು ತಿಳಿದು ಬಂದಿದೆ.

Comments are closed.