DK Suresh: ಡಿಕೆ ಸುರೇಶ್‌ ಪತ್ನಿ ಎಂದ ಮಹಿಳೆ ಅರೆಸ್ಟ್‌; ಕಾರಣ ಬಹಿರಂಗ!

Share the Article

DK Suresh: ಮಾಜಿ ಸಂಸದ ಡಿಕೆ ಸುರೇಶ್‌ ಪತ್ನಿ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ರಾಮನಗರ ಸೆನ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಮಹಿಳೆ ಪವಿತ್ರ ಎಂಬುವವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಡಿ.ಕೆ.ಸುರೇಶ್‌ ಪರ ವಕೀಲ ಪ್ರದೀಪ್‌ ಅವರು ದೂರನ್ನು ದಾಖಲು ಮಾಡಿದ್ದರು.

ಡಿಕೆ ಸುರೇಶ್‌ ಫೋಟೋ ಜೊತೆ ಮಹಿಳೆ ತನ್ನ ಫೋಟೋ ಎಡಿಟ್‌ ಮಾಡಿ ಎ.8 ರಂದು ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಈ ಕುರಿತು ವಕೀಲ ಪ್ರದೀಪ್‌ ದೂರು ನೀಡಿದ್ದರು.

ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಪವಿತ್ರ ಮೈಸೂರಿನಲ್ಲಿ ಸರಕಾರ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಗಂಡನಿಂದ ವಿಚ್ಛೇದನ ಪಡೆದಿದ್ದ ಈಕೆ ಮೈಸೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಅಕ್ಕಪಕ್ಕದ ಮನೆಯವರ ಕಿರಿಕಿರಿ ಹಿನ್ನೆಲೆ ಡಿಕೆ ಸುರೇಶ್‌ ಪತ್ನಿ ಎಂದು ಹೇಳಿದರೆ ಜನ ಹೆದರುತ್ತಾರೆ ಎನ್ನುವ ಕಾರಣ ನಾನು ಅವರ ಪತ್ನಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದರು.

ಮಹಿಳೆಯನ್ನು ಬಂಧನ ಮಾಡಿ ಪೊಲೀಸರು ಜೈಲಿಗೆ ಹಾಕಿದ್ದಾರೆ.

Comments are closed.