Pahalgam Terror Attack: ಪಹಲ್ಗಾಮ್‌ ದಾಳಿಯ ತನಿಖೆ ಕೋರಿದ್ದ ಅರ್ಜಿ ವಜಾ; ಸುಪ್ರೀಂಕೋರ್ಟ್‌ನಿಂದ ತರಾಟೆ!

Share the Article

Pahalgam Terror Attack: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂಕೋರ್ಟ್‌ ಗುರುವಾರ ನಿರಾಕರಿಸಿದೆ. ಇಂತಹ ಕ್ರಮ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಹೇಳಿದೆ.

ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌, ಮನವಿಯನ್ನು ಸಲ್ಲಿಸುವ ವಿಷಯದ ಸೂಕ್ಷ್ಮತೆಯನ್ನು ಪರಿಶೀಲಿಸಬೇಕಾಗಿತ್ತು ಎಂದು ಅರ್ಜಿದಾರರ ಮೇಲೆ ಗರಂ ಆಗಿದೆ.

ಸುಪ್ರೀಂಕೋರ್ಟ್‌ ಗುರುವಾರ ಅರ್ಜಿದಾರರನ್ನು ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಕುರಿತು ಪಿಐಎಲ್‌ ಸಲ್ಲಿಸಿದ್ದಕ್ಕಾಗಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

Comments are closed.