ಶ್ವಾನಕ್ಕೆ ಹೆಸರಿಟ್ಟ BCCI: ಹೈಕೋರ್ಟ್ನಿಂದ ನೋಟಿಸ್

New delhi : ನಾಯಿಗೆ ಹೆಸರಿಟ್ಟರೆ ಕೇಸು ಬೀಳುತ್ತೆ. ಏನಪ್ಪಾ ಇದು ಕಾಮಿಡಿ ಅನ್ನಬೇಡಿ. ಇದು ನಿಜ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ (BCCI) ಕಾನೂನಿನ ಕಂಟಕ ಎದುರಾಗಿದೆ. ಐಪಿಎಲ್ 2025 (IPL 2025) ರ ಮಧ್ಯೆ ಬಿಸಿಸಿಐಗೆ ದೆಹಲಿ ಹೈಕೋರ್ಟ್ನಿಂದ ನೋಟಿಸ್ ಕಳುಹಿಸಲಾಗಿದೆ. ದೆಹಲಿ ಕೋರ್ಟ್ ಬಿಸಿಸಿಐ ಮೇಲೆ ಈ ರೀತಿಯ ಕ್ರಮ ಜರುಗಿಸಲು ಕಾರಣ ಏನು ಎಂಬುದನ್ನು ನೋಡುವುದಾದರೆ, ಅದಕ್ಕೆ ಕಾರಣ ಇತ್ತೀಚೆಗಷ್ಟೇ ಬಿಸಿಸಿಐ, ಐಪಿಎಲ್ನಲ್ಲಿ ಪರಿಚಯಿಸಿದ್ದ ರೋಬೋ ಶ್ವಾನ (Robot Dog) ಕ್ಕೆ ಇಟ್ಟ ಹೆಸರು.

ಈ ರೋಬೋ ಶ್ವಾನವನ್ನು ಐಪಿಎಲ್ ಪಂದ್ಯಗಳ ಟಾಸ್ ಸಮಯದಲ್ಲಿ ಬಳಸಲಾಗುತ್ತದೆ. ಈ ಶ್ವಾನ ಅಭ್ಯಾಸದ ಸಮಯದಲ್ಲಿ ಆಟಗಾರರನ್ನು ಸಹ ಕವರ್ ಮಾಡುತ್ತದೆ. ಕೆಲವು ದಿನಗಳ ಹಿಂದೆ ಈ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡಲಾಗಿತ್ತು. ಈಗ ಈ ಹೆಸರೇ ಬಿಸಿಸಿಐಗೆ ಒಂದು ಕಂಟಕವಾಗಿ ಪರಿಣಮಿಸಿದೆ.
ಪ್ರಸಿದ್ಧ ಮಕ್ಕಳ ನಿಯತಕಾಲಿಕೆಯ ಹೆಸರು ಕೂಡ ಚಂಪಕ್ ಆಗಿದ್ದು, ಅದಕ್ಕಾಗಿಯೇ ಈ ಕಂಪನಿಯು ಬಿಸಿಸಿಐ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಬಿಸಿಸಿಐ ತನ್ನ ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡುವ ಮೂಲಕ ನೋಂದಾಯಿತ ಟ್ರೇಡ್ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ನಿಯತಕಾಲಿಕೆಯ ಆಡಳಿತ ಮಂಡಳಿ ಆರೋಪ ಹೊರಿಸಿದೆ.
High-Tech Robot Dog in IPL 2025#IPL #IPL2025 #IPLonJioStar pic.twitter.com/uV6DD2ge55
— IPO Investor Academy (@IPO_ACADEMY) April 18, 2025
ದೂರಿನನ್ವಯ ದೆಹಲಿ ಕೋರ್ಟ್ ಬಿಸಿಸಿಐಗೆ ನೋಟಿಸ್ ಕಳುಹಿಸಿದ್ದು, ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಟ್ಟಿರುವ ಬಗ್ಗೆ ಉತ್ತರ ಕೇಳಿದೆ. ಹೈಕೋರ್ಟ್ ಆದೇಶಿಸಿರುವಂತೆ ಮುಂದಿನ ನಾಲ್ಕು ವಾರಗಳಲ್ಲಿ ಬಿಸಿಸಿಐ ತನ್ನ ಲಿಖಿತ ಉತ್ತರವನ್ನು ನೀಡಬೇಕಾಗಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 9 ರಂದು ನಡೆಯಲಿದೆ.
ಶ್ವಾನ ರೋಬೋ ಚಂಪಕ್ನ ವೈಶಿಷ್ಟ್ಯಗಳು:
ಇದು ಅನೇಕ ಕ್ಯಾಮೆರಾಗಳನ್ನು ಹೊಂದಿದ್ದು ಆಟವನ್ನು ಎಲ್ಲಾ ಆಯಾಮಗಳಲ್ಲು ಸೇರಿ ಹಿಡಿಯುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲದೆ ಆಟಗಾರರ ಕಾರ್ಯಕ್ಷಮತೆಯ ಡೇಟಾವನ್ನು ಸಹ ನಿಯತ್ತಿನಿಂದ ನಿರ್ವಹಿಸುತ್ತದೆ. ಈ ಶ್ವಾನದ ಚಂಪಕ್ನ ಇನ್ನೊಂದು ದೊಡ್ಡ ವೈಶಿಷ್ಟ್ಯವೆಂದರೆ ಅದು ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಕೆಳಗೆ ಬಿದ್ದರೆ, ಅದು ತಾನಾಗಿಯೇ ಜೀವಂತ ನಾಯಿಯ ಥರ ಎದ್ದು ನಿಲ್ಲುವ, ಓಡಾಡುವ ಸಾಮರ್ಥ್ಯ ಹೊಂದಿದೆ.
Comments are closed.