Indian railway: ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ವೇಟಿಂಗ್ ಟಿಕೆಟ್ ಹೊಂದಿರುವವರು ಎಸಿ ಕೋಚ್ ಗೆ ನೋ ಎಂಟ್ರಿ!

Share the Article

Indian railway : ಭಾರತೀಯ ರೈಲ್ವೇ (Indian railway) ಇಲಾಖೆಯು ವಿಶೇಷವಾಗಿ ವೇಟಿಂಗ್ ಟಿಕೆಟ್ ಮೇಲೆ ಹೊಸ ನಿಯಮವನ್ನು ಪರಿಚರಿಸಿದೆ. ಭಾರತೀಯ ರೈಲ್ವೇಯ ಹೊಸ ನಿಯಮದ ಪ್ರಕಾರ, ಮೇ 1 ರಂದು ಅಂದರೆ ಇಂದಿನಿಂದ ರೈಲಿನಲ್ಲಿ ವೇಟಿಂಗ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಸ್ವೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ. ಬದಲಿಗೆ ಅಂತಹ ಪ್ರಯಾಣಿಕರು ಕೇವಲ ಸಾಮಾನ್ಯ ಕೋಚ್ ನಲ್ಲಿ ಪ್ರಯಾಣಿಸಬಹುದಾಗಿದೆ.

ಈ ಹಿಂದೆ ಆನ್‌ಲೈನ್ ಅಥವಾ ಕೌಂಟರ್‌ಗಳ ಮೂಲಕ ಟಿಕೆಟ್‌ ಬುಕಿಂಗ್ ಮಾಡಿದ ನಂತರ ಪ್ರಯಾಣಿಕರು ವೇಟಿಂಗ್ ಲೀಸ್ಟ್ ಹೊಂದಿವರ ಜೊತೆಗೆ ಜಗಳ ಮಾಡಿದ ಅನೇಕ ಘಟನೆ ನಡೆದಿತ್ತು. ಅಲ್ಲದೇ ಕೌಂಟರ್‌ಗಳಲ್ಲಿ ಟಿಕೆಟ್‌ ಬುಕಿಂಗ್ ಮಾಡಿದ್ದರೂ ವೇಟಿಂಗ್ ಲಿಸ್ಟ್‌ನಲ್ಲಿ ಹೆಸರಿದ್ದರೂ ಅವರು ಸ್ವೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಇದರಿಂದ ಉಳಿದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇದೀಗ ಅಂತಹ ಘಟನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಎಸಿ ಹಾಗು ಸ್ತ್ರೀಪರ್ ಬೋಗಿಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಇದನ್ನು ಮೀರಿ ಕೂಡ ವೇಟಿಂಗ್ ಲೀಸ್ಟ್ ಹೊಂದಿವರು ಎಸಿ ಕೋಚ್ ಅಲ್ಲಿ ಪ್ರಯಾಣಿಸಿದರೆ ದಂಡ ವಿಧಿಸಲಾಗುವುದು ಎಂದು ರೈಲ್ವೇ ಇಲಾಖೆ ತಿಳಿಸಿದೆ.

Comments are closed.