Ujire: ಲೈಂಗಿಕ ಕಿರುಕುಳ, ನೂರಾರು ಹುಡುಗಿಯರ ವೀಡಿಯೋ ಪ್ರಕರಣ; ಆರೋಪಿಗೆ ಜಾಮೀನು, ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು!

Share the Article

Mangaluru: ಬೆಳ್ತಂಗಡಿ ಕಾಲೇಜು ವಿದ್ಯಾರ್ಥಿ, ಕಬ್ಬಡಿ ಆಟಗಾರನ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಕಳ ಮೂಲದ ಸಯ್ಯದ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಜಾಮೀನು ಮಂಜೂರಾಗಿದೆ.

ಈತನನ್ನು ಪೋಲಿಸರಿಗೆ ಒಪ್ಪಿಸಿದ ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮನೋಜ್‌ ಮತ್ತು ಪ್ರಜ್ವಲ್‌ ಗೌಡ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಸಯ್ಯದ್‌ ಹಲ್ಲೆ ವಿರುದ್ಧ ದೂರು ನೀಡಿರುವ ಕುರಿತು ವರದಿಯಾಗಿದೆ.

ದ.ಕ. ಎಸ್ಪಿ ಯತೀಶ್‌ ಅವರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕೊಡಗು ಜಿಲ್ಲೆಯ ಸೋಮವಾರ ಪೇಟೆ ಮೂಲದ ಉಜಿರೆ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ ಎಂದು ಹೇಳಿದ್ದಾರೆ. ಆರೋಪಿ ಸಯ್ಯದ್‌ ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ವಾಲಿಬಾಲ್‌ ಕೋಚ್‌ ಆಗಿದ್ದ. ಅಲ್ಲಿ ಪರಿಚಯವಾಗಿ ನಂಬರ್‌ ಪಡೆದುಕೊಂಡು, ಫೋಟೋಗಳನ್ನು ಕಳುಹಿಸುವಂತೆ ಒತ್ತಾಯ ಮಾಡುತ್ತಿದ್ದ. ಲೈಂಗಿಕ ದೌರ್ಜನ್ಯ ಮಾಡಲು ಹಿಂಬಾಲಿಸಿ ಬರುತ್ತಿದ್ದ ಎಂದು ದೂರು ನೀಡಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕೇಸ್‌ ದಾಖಲು ಮಾಡಿದ್ದೇವೆ ಎಂದರು.

ಕಾರ್ಕಳ ಮೂಲದ ನಿವಾಸಿ ವಾಲಿಬಾಲ್‌ ಕೋಚ್‌ ಆಗಿದ್ದ ಸಯ್ಯದ್‌ ಕಾಲೇಜಿನ ಸ್ಪೋರ್ಟ್ಸ್‌ ವಿದ್ಯಾರ್ಥಿಗಳಿಗೆ ವಾಲಿಬಾಲ್‌ ಟ್ರೈನಿಂಗ್‌ ನೀಡುತ್ತಿದ್ದ.

Comments are closed.